ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನಾ ಸಮಾರಂಭವು ಎ.28 ರಂದು ಐ.ಬಿ ರಸ್ತೆಯಲ್ಲಿರುವ ಮಹಿಳಾ ಮಂಡಲಗಳ ಒಕ್ಕೂಟದಲ್ಲಿ ನಡೆಯಿತು. ಶಾಸಕ ಹರೀಶ್ ಪೂಂಜ ಕಾರ್ಯಕ್ರಮ ಉದ್ಘಾಟಿಸಿದರು.

ವಿಧಾನಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಸಭಾಂಗಣ ಉದ್ಘಾಟಿಸಿದರು. ಒಕ್ಕೂಟದ ಅಧ್ಯಕ್ಷೆ ಸವಿತಾ ಜಯದೇವ ಅಧ್ಯಕ್ಷತೆ ವಹಿಸಿದ್ದರು. ಪ.ಪಂ.ಅಧ್ಯಕ್ಷ ಜಯಾನಂದ ಗೌಡ, ಉದ್ಯಮಿ ಕಿರಣ್‌ಚಂದ್ರ ಪುಷ್ಪಗಿರಿ ಹಾಗೂ ದ.ಕ.ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ಕಾರ್ಯಕ್ರಮಗಳ ಸಂಯೋಜಕಿ ಕಾರ್ಯದರ್ಶಿ ಅಶ್ವಿನಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.

ನಿವೃತ್ತ ಆರೋಗ್ಯಾಧಿಕಾರಿ ಭಾರತಿ ಪಿ.ವಿ. ಅವರನ್ನು ಸನ್ಮಾನಿಸಲಾಯಿತು. ವಕೀಲರಾದ ಮನೋಹರ ಕುಮಾರ್ ಇಳಂತಿಲ ಹಾಗೂ ಅನಿಲ್ ಕುಮಾರ್ , ಉಪಾಧ್ಯಕ್ಷೆ ಉಮಾ ಆರ್.ರಾವ್, ಜತೆ ಕಾರ್ಯದರ್ಶಿ ವಿನೋದಿನಿ ರಾಮಪ್ಪ, ಕೋಶಾಧಿಕಾರಿ ಉಷಾ ಲಕ್ಷ್ಮಣ ಗೌಡ ಹಾಗೂ ಪದಾಧಿಕಾರಿಗಳು ಮತ್ತು ಸರ್ವ ಸದಸ್ಯರು ಉಪಸ್ಥಿತರಿದ್ದರು.
ಯಶೋಧಾ, ಗಾಯತ್ರಿ ಹಾಗೂ ಶ್ವೇತಾ ಪ್ರಾರ್ಥಿಸಿದರು.ಸಂಚಾಲಕಿ ಲೋಕೇಶ್ವರಿ ವಿನಯಚ್ಚಂದ್ರ ಮಹಿಳಾ ಮಂಡಲದ ಪಕ್ಷಿ ನೋಟ ವಿವರಿಸಿದರು.
ಗೌರವಾಧ್ಯಕ್ಷೆ ಶಾಂತ ಬಂಗೇರ ಸ್ವಾಗತಿಸಿ, ಕಾರ್ಯದರ್ಶಿ ಆಶಾ ಸತೀಶ್ ವಂದಿಸಿ, ಹೇಮಾವತಿ ಕೆ ಬೆಳ್ತಂಗಡಿ ನಿರೂಪಿಸಿದರು.