ಬೆಳ್ತಂಗಡಿ : ಭಾರತೀಯ ಮಜ್ದೂರ್ ಸಂಘ ತಾಲೂಕು ಸಮಿತಿ ಬೆಳ್ತಂಗಡಿ ಇದರ ತಾಲೂಕು ಸಮಿತಿ ಹಾಗೂ ಗ್ರಾಮ ಸಮಿತಿ ಪ್ರಮುಖರ ಸಭೆಯು ಬಿಎಂಎಸ್ ತಾಲೂಕು ಸಮಿತಿ ಅಧ್ಯಕ್ಷ ಉದಯ ಬಿ ಕೆ ಇವರ ಅಧ್ಯಕ್ಷತೆಯಲ್ಲಿ ಭಾರತೀಯ ಮಜ್ದೂರ್ ಸಂಘದ ಕಚೇರಿ ವಠಾರದಲ್ಲಿ ನಡೆಸಲಾಯಿತು.

ಈ ಸಭೆಯಲ್ಲಿ ಇತ್ತೀಚೆಗೆ ಮೃತರಾದ ಭಾರತೀಯ ಮಜ್ದೂರ್ ಸಂಘದ ಪೂರ್ಣಾವಧಿ ಕಾರ್ಯಕರ್ತರು ಹಾಗೂ ಹಿರಿಯ ನಾಯಕರಾದ ಡಿ.ಕೆ ಸದಾಶಿವ ಅವರಿಗೆ ಹಾಗೂ ಕಾಶ್ಮೀರದ ಪೆಹಲ್ ಗಾಮ್ ನಲ್ಲಿ ಭಯೋತ್ಪಾದಕರ ದಾಳಿಗೆ ತುತ್ತಾದ 26 ಜನ ಭಾರತೀಯರ ಸಾವಿಗೆ ಮೌನ ಪ್ರಾರ್ಥನೆ ಮೂಲಕ ಶ್ರದ್ಧಾಂಜಲಿ ಯನ್ನು ಸಮರ್ಪಿಸಲಾಯತು ಮತ್ತು ಪ್ರಸ್ತುತ ಸರಕಾರ ಹೊಸ ನಿಯಮದಿಂದ ಕಾರ್ಮಿಕರಿಗೆ ಬಹಳಷ್ಟು ತೊಂದರೆ ಆಗುತ್ತಿದ್ದೂ ಈ ಬಗ್ಗೆ ಸರಕಾರದ ವಿರುದ್ಧ ಪ್ರತಿಭಟನೆ ಸಭೆಯನ್ನು ಮಾಡುವುದೆಂದು ನಿರ್ಣಯಿಸಲಾಯಿತು.

ಈ ಸಂದರ್ಭದಲ್ಲಿ ಬಿಎಂಎಸ್ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್, ದ.ಕ. ಜಿಲ್ಲಾ ಕಟ್ಟಡ ಮತ್ತು ಇತರ ನಿರ್ಮಾಣ ಮಜ್ದೂರ್ ಸಂಘದ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಕುಮಾರ್ ನಾಥ್, ಉದಯ್ ಅಚಾರ್ಯ ಉಜಿರೆ, ಬಿಎಂಎಸ್ ಕೊಕ್ಕಡ ವಲಯದ ಸಂಚಾಲಕರಾದ ಚಂದ್ರಶೇಖರ್ ಗಾನಗಿರಿ ಹಾಗೂ ತಾಲೂಕಿನ ವಿವಿಧ ಗ್ರಾಮದ ಬಿಎಂಎಸ್ ನ ಅಧ್ಯಕ್ಷರು, ಕಾರ್ಯದರ್ಶಿ ಉಪಸ್ಥಿತರಿದ್ದರು. ಕುಮಾರ್ ನಾಥ್ ಸ್ವಾಗತಿಸಿ ಜಯರಾಜ ಸಾಲಿಯಾನ್ ವಂದಿಸಿದರು.