

ಬೆಳ್ತಂಗಡಿ: ಅಯೋಧ್ಯೆಯಲ್ಲಿ ಎ.26 ರಂದು ಶ್ರೀ ರಾಮ ಕ್ಷೇತ್ರ ಮಹಾ ಸಂಸ್ಥಾನ ಜಗದ್ಗುರು ಪೀಠದ ಪೀಠಧೀಶರಾದ ಮಹಾಮಂಡಲೇಶ್ವರ 1008 ಸದ್ಗುರು ಶ್ರೀ ಬ್ರಹ್ಮಾನಂದ ಸರಸ್ವತಿ ಸ್ವಾಮಿ ಮಹಾರಾಜ ರವರು ಅಯೋಧ್ಯೆಯ ಶಾಸಕ ವೇದ್ ಪ್ರಕಾಶ್ ಗುಪ್ತ, ಅಯೋಧ್ಯೆಯ ಸಂಸದ ಅವದೇಶ್ ಪ್ರಸಾದ್, ಅಯೋಧ್ಯೆಯ ಮೇಯರ್ ಗಿರೀಶ್ ಪತಿ ತ್ರಿಪಾಠಿ,



ಅಯೋಧ್ಯೆಯ ಮಾಜಿ ಸಂಸದ ಲಲ್ಲೂ ಸಿಂಗ್, ಅಯೋಧ್ಯೆಯ ಜಿಲ್ಲಾ ಪಂಚಾಯತ್ ಅಧ್ಯಕ್ಷ ಅಲೋಕ್ ಸಿಂಗ್ ರೋಹಿತ್ ಅವರನ್ನು ಭೇಟಿ ಮಾಡಿ ಮೇ 19 ರಂದು ಅಯೋಧ್ಯೆಯಲ್ಲಿ ನಡೆಯಲಿರುವ ಶಾಖಾ ಮಠದ ಭೂಮಿ ಪೂಜೆಗೆ ಆಹ್ವಾನಿಸಿದರು.