April 28, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಕೊರಿಂಜ: ಯೋಗ ತರಬೇತಿ ಶಿಬಿರದ ಪೂರ್ವಭಾವಿ ಸಭೆ

ಕೊರಿಂಜ: ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಯೋಗ ತರಬೇತಿ ನಡೆಸುವ ಬಗ್ಗೆ ಪೂರ್ವ ಭಾವಿ ಸಭೆಯು ಎ.27 ರಂದು ನಡೆಯಿತು.

ಗುರುದೇವ ಶ್ರೀ ರವಿಶಂಕರ ಜಿ. ಯವರ ಸುದರ್ಶನ ಕ್ರಿಯೆಯ ಬಗ್ಗೆ ಭೌತಿಕ ಕ್ರಿಯೆಯ ಪ್ರಯೋಜನ ದ ಬಗ್ಗೆ ಅವರ ಶಿಷ್ಯೆ ಕಲಾ ಕಾಸರಗೋಡು ಇವರು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಮಾತನಾಡಿ ಮೇ 13 ರಿಂದ 20 ರವರಗೆ ಸಂಜೆ 6ರಿಂದ 8.30 ತನಕ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ವೃದ್ಧಿಸುವ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.

ಈ ಸಂದರ್ಭದಲ್ಲಿ ಧ.ಗ್ರಾ. ಯೋಜನೆಯ ನಿವೃತ್ತ ಮೇಲ್ವಿಚಾರಕಿ ಶ್ರೀಮತಿ ವಾರಿಜ ವಿ. ಶೆಟ್ಟಿ ಕೊರಿಂಜ ಉಪಸ್ಥಿತರಿದ್ದರು.

ಉರುವಾಲು ವಿಭಾಗದ ಸೇವಾಪ್ರತಿನಿಧಿ ಸೀತಾರಾಮ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.

ವಿ.ಸೂ: ಯೋಗ ಶಿಬಿರದಲ್ಲಿ ಭಾಗವಹಿಸುವವರು ದೂರವಾಣಿ ಸಂಖ್ಯೆ 9448061006 ಸಂಪರ್ಕಿಸಿ.

Related posts

ಪದ್ಮುಂಜದಲ್ಲಿ ಅಕ್ರಮ ಗೋ ಸಾಗಾಟ: ವಾಹನ ಸಹಿತ ಆರೋಪಿ ಬಂಧನ

Suddi Udaya

ಬಂಗಾಡಿ-ಕೊಲ್ಲಿ ಒಂದು ವಾರದಿಂದ 3 ಫೇಸ್ ವಿದ್ಯುತ್ ಇಲ್ಲದೆ ಕೃಷಿಕರಿಗೆ ಸಂಕಷ್ಟ: ಕೂಡಲೇ ಕ್ರಮ ಕೈಗೊಳ್ಳುವಂತೆ ತಾ.ಪಂ ಮಾಜಿ ಅಧ್ಯಕ್ಷ ಮುಕುಂದ ಸುವರ್ಣ ಆಗ್ರಹ

Suddi Udaya

ನ.4 -5 : ಅರಣ್ಯ ಮೂಲ ಬುಡಕಟ್ಟು ಸಮುದಾಯಗಳ ಪ್ರಚಲಿತ ವಿಷಯಗಳ ಕುರಿತು ರಾಜ್ಯಮಟ್ಟದ ಕಾರ್ಯಾಗಾರ ಹಾಗೂ ಸಾಮಾನ್ಯ ಸಭೆ

Suddi Udaya

ಬೆಳ್ತಂಗಡಿ ಧರ್ಮ ಪ್ರಾಂತ್ಯ ಉದನೆ ವಲಯ ಮಕ್ಕಳ ಪ್ರತಿಭೋತ್ಸವ ನೆಲ್ಯಾಡಿ ಅಲ್ಫೋನ್ಸಸಂಡೆ ಸ್ಕೂಲ್ ಗೆ ಸಮಗ್ರ ಪ್ರಶಸ್ತಿ

Suddi Udaya

ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಪ್ರಣಾಳಿಕೆ ಬಿಡುಗಡೆ: ಪ್ರಣಾಳಿಕೆಯಲ್ಲಿರುವ ಅಂಶಗಳೇನು?

Suddi Udaya

ಕುದುರೆಮುಖ ರಾಷ್ಟ್ರೀಯ ಉದ್ಯಾನವನದಿಂದ ಪುನರ್ವಸತಿ ಹೊಂದಿರುವ ಅರ್ಹ ಕುಟುಂಬಗಳಿಗೆ ಕೃಷಿಗೆ ಸಂಬಂಧಪಟ್ಟ ಉಪಕರಣ ವಿತರಣೆ

Suddi Udaya
error: Content is protected !!