ಧರ್ಮಸ್ಥಳ ಗ್ರಾಮ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಧರ್ಮಸ್ಥಳ ಒಕ್ಕೂಟದ ತ್ರೈಮಾಸಿಕ ಸಭೆಯನ್ನು ಶ್ರೀಮತಿ ಸುನೀತಾ ರವರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು.
ಈ ವೇಳೆ ಅನುಗ್ರಹ ತಂಡಕ್ಕೆ ಜವಾಬ್ದಾರಿ ನೀಡಲಾಗಿತ್ತು, ಕೃಷಿ ಅಧಿಕಾರಿ ರಾಮ್ ಕುಮಾರ್, ಸೇವಾ ಪ್ರತಿನಿಧಿ ಶ್ರೀಮತಿ ಸುಜಾತ, ಒಕ್ಕೂಟದ ಪದಾಧಿಕಾರಿಗಳು, ಶೌರ್ಯ ವಿಪತ್ತು ಸಂಘದ ಅಧ್ಯಕ್ಷರು ಒಕ್ಕೂಟದ ಎಲ್ಲಾ ತಂಡದ ಅಧ್ಯಕ್ಷರು, ಕಾರ್ಯದರ್ಶಿ, ಸದಸ್ಯರು ಉಪಸ್ಥಿತರಿದ್ದರು. ಅನುಗ್ರಹ ಸಂಘದ ಸದಸ್ಯರಾದ ಶ್ರೀಮತಿ ಅನ್ನಮ್ಮ, ಶ್ರೀಮತಿ ವೇದಾವತಿ ಇವರು ಗೀತೆಯನ್ನು ಹಾಡಿದರು.
ಶ್ರೀಮತಿ ಜಯ ಮೋನಪ್ಪ ಗೌಡ ಸ್ವಾಗತಿಸಿ , ಶ್ರೀಮತಿ ಸಾಲಿ ವರ್ಗಿಸ್ ಸಂಘದ ವರದಿ ವಾಚಿಸಿದರು. ಶ್ರೀಮತಿ ಜಯಂತಿ ನಟರಾಜ್ ಧನ್ಯವಾದವಿತ್ತರು. ಶ್ರೀಮತಿ ಅನ್ನಮ್ಮ ಜೋರ್ಜ್ ನಿರೂಪಿಸಿದರು.