ಗೇರುಕಟ್ಟೆ : ಭಾರಿ ಗುಡುಗು, ಗಾಳಿ-ಮಳೆಗೆ ಆಡಿಕೆ ಸಾಗಾಟದ ಪಿಕಪ್ ವಾಹನ ಸುಮಾರು 20 ಅಡಿ ಆಳದ ಬಾವಿಗೆ ಬಿದ್ದ ಘಟನೆ ಎ.26 ರಂದು ಸಂಜೆ 7 ಗಂಟೆಗೆ ಸಂಭವಿಸಿದೆ.

ಗುರುವಾಯನಕೆರೆ ಯಿಂದ ಪುತ್ತೂರಿಗೆ 65 ಕೆ.ಜಿ ತೂಕದ 30 ಚೀಲ ಅಡಿಕೆ ಸಾಗಿಸುತ್ತಿದ್ದರು. ಮಂಜೊಟ್ಟಿ ಸಮೀಪದ ಕೇಳ್ತಾಜೆ ನಿವಾಸಿ ಹನೀಫ್ ಮಾಲೀಕತ್ವದ ಪಿಕಪ್ ನಲ್ಲಿ ಸಾಗಿಸುವ ಸಂದರ್ಭದಲ್ಲಿ ನಾಳ ಸಮೀಪದ ಮೈಲೋಡಿ ಕಡಿದಾದ ತಿರುವಿನಲ್ಲಿರುವ ಗೆದ್ದಯ ಪಕ್ಕದ ಬಾವಿಗೆ ತಲೆ ಕೆಳಗಾಗಿ ಬಿದ್ದಿದೆ.ಚಾಲಕ ಮತ್ತು ನಿರ್ವಾಹಕರಿಗೆ ಯಾವುದೇ ರೀತಿಯ ತೊಂದರೆಯಾಗಿಲ್ಲ.ಸ್ಥಳೀಯರ ಸಹಾಯದಿಂದ ಅಡಿಕೆ ತುಂಬಿದ ಚೀಲಗಳನ್ನು ಬೇರೆ ವಾಹನಕ್ಕೆ ಸಾಗಿಸಲು ಸಹಕರಿಸಿದರು.