
ಬೆಳ್ತಂಗಡಿ: ಕನಾ೯ಟಕ ದಲಿತ ಚಳುವಳಿಗೆ 50ರ ಸಂಭ್ರಮದ ಅಂಗವಾಗಿ ದಲಿತ ಸಂಘಟನೆಗಳ ಸಹಭಾಗಿತ್ವದಲ್ಲಿ ‘ಕನಾ೯ಟಕ ದಲಿತ ಚಳುವಳಿ 50ರ ಸಂಭ್ರಮ ಸಮಾವೇಶ -2025 ಹಾಗೂ ದಲಿತ ಸಾಂಸ್ಕೃತಿಕ ವೈವಿಧ್ಯ ಕಾಯ೯ಕ್ರಮ ಎ.28 ರಂದು ಬೆಳ್ತಂಗಡಿ ಶ್ರೀ ಧ.ಮಂ.ಕಲಾಭವನದಲ್ಲಿ ಆರಂಭಗೊಂಡಿತು.

ವಿಶ್ವ ಮೈತ್ರಿ ಬೌದ್ಧವಿಹಾರ ಮೈಸೂರಿನ ಪೂಜ್ಯ ಡಾ. ಕಲ್ಯಾಣಸಿರಿ ಭಂತೇಜಿ ಅವರ ದಿವ್ಯ ಸಾನಿಧ್ಯದಲ್ಲಿ ದೊಂದಿ ಬೆಳಗಿಸಿ, ಅಂಬೇಡ್ಕರ್ ಭಾವಚಿತ್ರಕ್ಕೆ ಮಾಲಾರ್ಪಣೆ ಹಾಗೂ ಪ್ರೊ.ಬಿ.ಕೃಷ್ಣಪ್ಪ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡುವ ಮೂಲಕ
ಸಮಾವೇಶಕ್ಕೆ ಚಾಲನೆ ನೀಡಲಾಯಿತು.
ಶಾಸಕರುಗಳಾದ ಹರೀಶ್ ಪೂಂಜ ದೊಂದಿಯನ್ನು ಬೆಳಗಿಸಿದರು. ಅಧ್ಯಕ್ಷತೆಯನ್ನು ದಲಿತ ಚಳುವಳಿಯ 50ರ ಸಂಭ್ರಮಾಚರಣೆ ಸಮಿತಿಯ ಅಧ್ಯಕ್ಷ ಬಿ.ಕೆ ವಸಂತ್ ಅಧ್ಯಕ್ಷತೆ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಭಾಗೀರಥಿ ಮುರುಳ್ಯ, ಎಂಎಲ್‌ಸಿ ಪ್ರತಾಪಸಿಂಹ ನಾಯಕ್ ಭಾಗವಹಿಸಿದ್ದರು.

ಈ ವೇಳೆ ಕೆ.ಪಿ.ಸಿ.ಸಿ. ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಂ, ಮೈಸೂರು ನಿವೃತ್ತ ಡಿ.ವೈ.ಎಸ್.ಪಿ. ಸುಹೈಲ್ ಅಹಮದ್, ಕಿರಣ್ ಚಂದ್ರ ಡಿ. ಪುಷ್ಪಗಿರಿ ಉರುವಾಲು ಉದ್ಯಮಿ, ತಾಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಸಾದ್ ಶೆಟ್ಟಿ ಏಣಿಂಜೆ, ಅಪರ ಸರಕಾರಿ ವಕೀಲರು ಮನೋಹರ್ ಕುಮಾರ್ ಎ. ,ಬೆಳ್ತಂಗಡಿ ಪ.ಪಂ. ಅಧ್ಯಕ್ಷ ಜಯಾನಂದ ಗೌಡ , ಪ.ಪಂ. ಉಪಾಧ್ಯಕ್ಷೆ ಗೌರಿ , ತಾಲೂಕು ವಕೀಲರ ಸಂಘದ ಅಧ್ಯಕ್ಷ ವಸಂತ ಮರಕಡ, ಚೆನ್ನಕೇಶವ ಬೆಳ್ತಂಗಡಿ, ಎಸ್.ಬೇಬಿ ಸುವರ್ಣ, ಪದ್ಮನಾಭ ಗರ್ಡಾಡಿ, ಎನ್.ಕೆ.ಸುಂದರ್ ಲ್ಯಾಲ, ಅಣ್ಣು ಸಾಧನಾ ಪದ್ಮುಂಜ, ಪಿ.ಕೆ.ರಾಜು, ಪಡಂಗಡಿ, ಕಿರಣ್ ಕುಮಾರ್, ಪುದುವೆಟ್ಟು ಶ್ರೀಧರ್ ಎಸ್. ಕಳೆಂಜ, ವೆಂಕಣ್ಣ ಕೊಯ್ಯೂರು, ಕೆ.ನೇಮಿರಾಜ್, ಕಿಲ್ಲೂರು, ರಮೇಶ್ ಆರ್. ಬೆಳ್ತಂಗಡಿ ರಮೇಶ್ ಉಮಿಯ, ಸಂಜೀವ ಆರ್. ಬೆಳ್ತಂಗಡಿ, ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಸತೀಶ್ ಕೆ. ಕಾಶಿಪಟ್ಣ, ದಸಂಸ ಜಿಲ್ಲಾ ಸಂಚಾಲಕ ಕೃಷ್ಣಪ್ಪ ಸುಣ್ಣಾಜೆ, ದ.ಕ ದಸಂಸ ಜಿಲ್ಲಾ ಸಂಚಾಲಕ ಜಗದೀಶ್ ಪಾಂಡೇಶ್ವರ್, ಪ್ರೆಮಿ ಫೆರ್ನಾಂಡಿಸ್ ಜಿಲ್ಲಾ ಪ್ರಧಾನ ಸಂಚಾಲಕರು, ಮ.ಬಂ.ವೇದಿಕೆ, ದ.ಕ. , ಸಂತೋಷ್ ಕುಮಾರ್.ಜಿಲ್ಲಾ ಕೆ.ಡಿ.ಪಿ.ಸದಸ್ಯರು, ಬೆಳ್ತಂಗಡಿ ಗೋಪಾಲ್ ಮುತ್ತೂರು ಜಿಲ್ಲಾ ಅಧ್ಯಕ್ಷರು ಬಿಎಸ್‌ಪಿ ಮಂಗಳೂರು, ರಾಜಾ ಚಂಡ್ತಿಮಾರ್ ಜಿಲ್ಲಾ ಗೌರವಾಧ್ಯಕ್ಷರು, ಸಮಾನ ಮನಸ್ಕ ಸಂಘಟನೆ, ಮಂಗಳೂರು, ನಾಗೇಶ್ ಕುಮಾರ್ ಗೌಡ ಅಧ್ಯಕ್ಷರು ಬ್ಲಾಕ್ ಕಾಂಗ್ರೆಸ್ ಸಮಿತಿ, ಬೆಳ್ತಂಗಡಿ (ಗ್ರಾಮೀಣ), ಶಿವಕುಮಾರ್ ಹಿರಿಯ ನ್ಯಾಯವಾದಿಗಳು ಬೆಳ್ತಂಗಡಿ, ಪಿ.ಎಸ್.ಶ್ರೀನಿವಾಸ್ ಅಧ್ಯಕ್ಷರು, ಬಿಎಸ್‌ಪಿ, ಬೆಳ್ತಂಗಡಿ, ಅಕ್ಟರ್ ಬೆಳ್ತಂಗಡಿ ಅಧ್ಯಕ್ಷರು, ಎಸ್.ಡಿ.ಪಿ.ಐ. ಬೆಳ್ತಂಗಡಿ, ಜಯಕೀರ್ತಿ ಜೈನ್ ಧರ್ಮಸ್ಥಳ ಮಾಜಿ ಅಧ್ಯಕ್ಷರು, ಸರಕಾರಿ ನೌಕರರ ಸಂಘ ಬೆಳ್ತಂಗಡಿ, ರಘು ಧರ್ಮಸೇನ್ ಉಪನ್ಯಾಸಕರು ಮಂಗಳೂರು ವಿಶ್ವವಿದ್ಯಾಲಯ, ನಿತೀಶ್ ಎಚ್. ಕೋಟ್ಯಾನ್ ಅಧ್ಯಕ್ಷರು ವೇಣೂರು-ಪೆರ್ಮುಡ ಕಂಬಳ ಸಮಿತಿ, ಸೇವಿಯಾರ್ ಪಾಲೇಲಿ ನಿಕಟಪೂರ್ವ ಅಧ್ಯಕ್ಷರು ಆಲ್ ಇಂಡಿಯಾ ಕಥೋಲಿಕ್ ಯೂನಿಯನ್ ಕರ್ನಾಟಕ, ಶೀನ ಬಂಗೇರ ಲಾಯಿಲ ನಿವೃತ್ತ ಸಿಬ್ಬಂದಿ, ಶಿಕ್ಷಣ ಇಲಾಖೆ, ಶೇಖರ್ ಎಲ್. ಪದ್ಮನಾಭ್ ಸಾಲ್ಯಾನ್ ಅಧ್ಯಕ್ಷರು ಗ್ಯಾರಂಟಿ ಸಮಿತಿ, ನಜೀರ್ ಅಧ್ಯಕ್ಷರು ತಾಲೂಕು ಮಸ್ಲಿಂ ಒಕ್ಕೂಟ ಬೆಳ್ತಂಗಡಿ, ಕರಿಯ ಗುರಿಕ್ಕಾರ ಧರ್ಮಸ್ಥಳ, ಈಶ್ವರ ಬೈರ ಅಧ್ಯಕ್ಷರು ಎಸ್ಸಿ ಮೋರ್ಚಾ ಬಿ.ಜೆ.ಪಿ.ಮಂಡಲ, ಬೆಳ್ತಂಗಡಿ, ಸಿ.ಕೆ ಚಂದ್ರಕಲಾ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರು ವಿಶೇಷ ಆಹ್ವಾನಿತರಾಗಿ ಭಾಗವಹಿಸಿದ್ದರು.