ಕೊಯ್ಯೂರು ಗ್ರಾಮದ ದೇವಸ ನಿವಾಸಿ ಬಾಬು ಗೌಡರು ಎ. 27 ರಂದು ನಿಧನರಾಗಿದ್ದಾರೆ.
ಇವರು ಕೊಯ್ಯೂರಿನ ಪ್ರಸಿದ್ಧ ಹಾಗೂ ಹಿರಿಯ ಸಾರಣೆ ಮೇಸ್ತ್ರಿಯಾಗಿದ್ದರು. ಕೊಯ್ಯೂರು ಮಾತ್ರವಲ್ಲದೆ ಬೆಳ್ತಂಗಡಿ ತಾಲೂಕಿನ ಬೇರೆ ಬೇರೆ ಕಡೆಗಳಲ್ಲಿ ಮೇಸ್ತ್ರಿ ಕೆಲಸವನ್ನು ಮಾಡಿ ಜನ ಮನ್ನಣೆ ಗಳಿಸಿದ್ದಾರೆ. ಅಲ್ಲದೆ ಚಿಕ್ಕಮಗಳೂರು, ಕೊಡಗಿನ ಮಡಿಕೇರಿ, ಸೋಮಾರಪೇಟೆಗಳಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿ ಮಾಡಿದ್ದಾರೆ.