ಕೊರಿಂಜ: ಕೊರಿಂಜ ಶ್ರೀ ಪಂಚಲಿಂಗೇಶ್ವರ ಸಭಾ ಭವನದಲ್ಲಿ ಯೋಗ ತರಬೇತಿ ನಡೆಸುವ ಬಗ್ಗೆ ಪೂರ್ವ ಭಾವಿ ಸಭೆಯು ಎ.27 ರಂದು ನಡೆಯಿತು.
ಗುರುದೇವ ಶ್ರೀ ರವಿಶಂಕರ ಜಿ. ಯವರ ಸುದರ್ಶನ ಕ್ರಿಯೆಯ ಬಗ್ಗೆ ಭೌತಿಕ ಕ್ರಿಯೆಯ ಪ್ರಯೋಜನ ದ ಬಗ್ಗೆ ಅವರ ಶಿಷ್ಯೆ ಕಲಾ ಕಾಸರಗೋಡು ಇವರು ಮಾರ್ಗದರ್ಶನ ನೀಡಿದರು.

ಸಭೆಯಲ್ಲಿ ಪಂಚಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಯೋಗೀಶ್ ಪೂಜಾರಿ ಕಡ್ತಿಲ ಮಾತನಾಡಿ ಮೇ 13 ರಿಂದ 20 ರವರಗೆ ಸಂಜೆ 6ರಿಂದ 8.30 ತನಕ ಪಂಚಲಿಂಗೇಶ್ವರ ಸಭಾಭವನದಲ್ಲಿ ನಡೆಯುವ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯ ವೃದ್ಧಿಸುವ ಪ್ರಯೋಜನ ಪಡೆದುಕೊಳ್ಳಲು ಕರೆ ನೀಡಿದರು.
ಈ ಸಂದರ್ಭದಲ್ಲಿ ಧ.ಗ್ರಾ. ಯೋಜನೆಯ ನಿವೃತ್ತ ಮೇಲ್ವಿಚಾರಕಿ ಶ್ರೀಮತಿ ವಾರಿಜ ವಿ. ಶೆಟ್ಟಿ ಕೊರಿಂಜ ಉಪಸ್ಥಿತರಿದ್ದರು.
ಉರುವಾಲು ವಿಭಾಗದ ಸೇವಾಪ್ರತಿನಿಧಿ ಸೀತಾರಾಮ ಆಳ್ವ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ವಿ.ಸೂ: ಯೋಗ ಶಿಬಿರದಲ್ಲಿ ಭಾಗವಹಿಸುವವರು ದೂರವಾಣಿ ಸಂಖ್ಯೆ 9448061006 ಸಂಪರ್ಕಿಸಿ.