ಬೆಳ್ತಂಗಡಿ: ಸಾಮಾಜಿಕ ಸೇವೆಯಲ್ಲಿ ಸದಾಮುಂದಿರುವ ಅಖಿಲ ಕರ್ನಾಟಕ ರಾಜಕೇಸರಿ ಟ್ರಸ್ಟ್ ಬೆಳ್ತಂಗಡಿ ತಾಲೂಕು ಇದರ ವತಿಯಿಂದ 554 ಸೇವಯೋಜನೆಯಾಗಿ ಮೇಲಂತಬೆಟ್ಟು ಕಬ್ಬಿಣಹಿತ್ತಿಲು ಎಂಬಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿರುವ ನೇತ್ರಾವತಿ ಎಂಬುವರು 4 ತಿಂಗಳ ಹಿಂದೆ ಬೆನ್ನಿಗೆ ಮರ ಬಿದ್ದ ಕಾರಣ ಗಂಭೀರವಾದ ಆರೋಗ್ಯ ಸಮಸ್ಯೆಯು ಉಂಟಾಗಿ ವೈದ್ಯಕೀಯ ತಪಾಸಣೆಗಳು ಮತ್ತು ಚಿಕಿತ್ಸೆಗಾಗಿ ಹೆಚ್ಚಿನ ವೆಚ್ಚವಾಗುತ್ತಿರುವ ಹಿನ್ನೆಲೆಯಲ್ಲಿ, ಆರ್ಥಿಕ ಸಂಕಷ್ಟವನ್ನು ಅನುಭವಿಸುತ್ತಿದ್ದಾರೆ. ಇವರಿಗೆ ರಾಜಕೇಸರಿ ಟ್ರಸ್ಟ್ ವತಿಯಿಂದ 25 ಕೆಜಿ ಅಕ್ಕಿ ಮತ್ತು ದಿನ ಸಾಮಾಗ್ರಿಗಳೊಂದಿಗೆ ಮತ್ತು ವೈದ್ಯಕೀಯ ತಪಾಸಣೆಗಾಗಿ 4000 ಕಿರು ಸಹಾಯವನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ರಾಜ ಕೇಸರಿ ಸಂಘಟನೆಯ ಸಂಸ್ಥಾಪಕ ದೀಪಕ್ ಜಿ ಬೆಳ್ತಂಗಡಿ, ಬೆಳ್ತಂಗಡಿ ತಾಲೂಕು ಅಧ್ಯಕ್ಷ ವಿನೋದ್ ಪೂಜಾರಿ, ಪ್ರಧಾನ ಕಾರ್ಯದರ್ಶಿಯಾದ ಪ್ರಶಾಂತ್ ಗುರುವಾಯನಕೆರೆ , ಸಂಘಟನಾ ಪ್ರಮುಖರಾದ ಸತೀಶ್ ಗೌಡ ಕಂಗಿತ್ತಿಲ್ಲ, ಸಹ ಸಂಚಾಲಕರಾದ ಶರತ್ ಕರಾಯ, ನಿಕಟಪೂರ್ವ ಅಧ್ಯಕ್ಷ ಸಂದೀಪ್ ಬೆಳ್ತಂಗಡಿ, ವಾಣಿ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ಮುಖ್ಯಸ್ಥರು ಮತ್ತು ಜೆ ಸಿ ಐ ಭಾರತದ ವಲಯ ತರಬೇತುದಾರರಾದ ಶಂಕರ್ ರಾವ್ ಉಪಸ್ಥಿತರಿದ್ದರು.