26.1 C
ಪುತ್ತೂರು, ಬೆಳ್ತಂಗಡಿ
April 30, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಲಾಯಿಲ: ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಕಳವು

ಬೆಳ್ತಂಗಡಿ : ಲಾಯಿಲ ಟಿ.ಬಿ ಕ್ರಾಸ್ ಬಳಿ ಮನೆಯ ಅಂಗಳದಲ್ಲಿ ನಿಲ್ಲಿಸಿದ್ದ ಬೈಕ್ ಅನ್ನು ಕಳ್ಳತನ ಮಾಡಿದ ಘಟನೆ ನಡೆದಿದ್ದು ಈ ಬಗ್ಗೆ ಬೆಳ್ತಂಗಡಿ ಠಾಣೆಯಲ್ಲಿ ಪ್ರಕರಣ‌ ದಾಖಲಿಸಲಾಗಿದೆ.

ಬೆಳ್ತಂಗಡಿ ತಾಲೂಕಿನ ಲಾಯಿಲ ಗ್ರಾಮದ ಟಿ.ಬಿ ಕ್ರಾಸ್ ಹಳೆಪೇಟೆ ನಿವಾಸಿ ವರದರಾಜ ಹೆಗ್ಡೆ ಎಂಬವರ ಮನೆಯ ಅಂಗಳದಿಂದಲೇ ಬೈಕ್ ಕಳ್ಳತನವಾಗಿದೆ. ವರದರಾಜ ಹೆಗ್ಡೆ ಅವರು ಸೇಲ್ಸ್ ಮ್ಯಾ‌ನ್ ಕೆಲಸ ಮಾಡಿಕೊಂಡಿದ್ದು ಏ.25ರಂದು ಕೆಲಸ ಮುಗಿಸಿ ಬಂದು ರಾತ್ರಿಯ ವೇಳೆ ಮನೆಯ ಹೊರಗೆ ಶೆಡ್ ನಲ್ಲಿ ತನ್ನ ಕೆ.ಎ 70 E 1651ನಂಬರಿನ ಸುಜುಕಿ ಕಂಪೆನಿಯ ಮೋಟಾರ್ ಸೈಕಲ್ ಅನ್ನು ನಿಲ್ಲಿಸಿದ್ದರು. ಏ.26ರಂದು ಬೆಳಗ್ಗೆ ಎದ್ದು ನೋಡಿದಾಗ ಬೈಕ್ ನಾಪತ್ತೆಯಾಗಿತ್ತು. ನೆರಕರೆಯಲ್ಲಿ ಹುಡುಕಾಡಿದರೂ ಬೈಕ್ ಪತ್ತೆಯಾಗದ ಹಿನ್ನಲೆಯಲ್ಲಿ ಬೆಳ್ತಂಗಡಿ ಪೊಲೀಸರಿಗೆ ಏ.26 ರಂದು ದೂರು ನೀಡಲಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

Related posts

ಧರ್ಮಸ್ಥಳ : ಕಾರು ಬೈಕ್ ನಡುವೆ ಅಪಘಾತ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ವಾರ್ಷಿಕ ಕ್ರೀಡಾಕೂಟ

Suddi Udaya

ಚಾರ್ಮಾಡಿ, ತೋಟತ್ತಾಡಿ, ಚಿಬಿದ್ರೆ ಗ್ರಾಮಗಳಲ್ಲಿ ಗೆಜ್ಜೆಗಿರಿ ಜಾತ್ರೋತ್ಸವ ಸಮಾಲೋಚನಾ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ರವಿ ಕಕ್ಕೆಪದವು ರವರಿಗೆ ತೆರೆಮರೆಯ ನಾಯಕ ಪುರಸ್ಕಾರ

Suddi Udaya

ಶಾಸಕ ಹರೀಶ್ ಪೂಂಜರವರ ವಿಶೇಷ ಪ್ರಯತ್ನದಿಂದ ಬಳಂಜ-ಡೆಂಜೋಲಿ- ಗರ್ಡಾಡಿ ರಸ್ತೆ ಅಭಿವೃದ್ಧಿಗೆ ರೂ. 2 ಕೋಟಿ ಅನುದಾನ ಬಿಡುಗಡೆ: ಜನರ ಬಹುದಿನದ ಬೇಡಿಕೆ ಈಡೇರಿಸಿದ ಶಾಸಕ ಹರೀಶ್ ಪೂಂಜರವರಿಗೆ ಸಾರ್ವಜನಿಕರಿಂದ ಮೆಚ್ಚುಗೆ

Suddi Udaya

ಮದ್ದಡ್ಕ ರಾಮ ಭಜನಾ ಮಂದಿರದಲ್ಲಿ ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೊಸರು ಕುಡಿಕೆ ಉತ್ಸವದ ಧಾರ್ಮಿಕ ಸಭೆ

Suddi Udaya
error: Content is protected !!