ಬೆಳ್ತಂಗಡಿ: ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಯವರಿಗೆ ಕುತ್ಲೂರು ಸರಕಾರಿ ಶಾಲೆಯ ಕೈತೋಟದಲ್ಲಿ ಬೆಳೆದ ಸಾವಯವ ತರಕಾರಿ ನೀಡಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ, ಶಾಲೆಯ ಅಭಿವೃದ್ಧಿಯ ಹರಿಕಾರ ಕೆ.ರಾಮಚಂದ್ರ ಭಟ್ ಕುಕ್ಕುಜೆ ಕುತ್ಲೂರು ತರಕಾರಿಯನ್ನುನೀಡಿದರು. ಈ ವೇಳೆ ಶಾಲೆಯ ಅಭಿವೃದ್ಧಿಯ ದೃಷ್ಟಿಯಿಂದ ಶಾಲೆಗೆ ಪೂರ್ಣ ಪ್ರಮಾಣದ ಸಹಕಾರ ನೀಡುವ ಭರವಸೆ ನೀಡಿದರು.