September 6, 2026
ಅಪರಾಧ ಸುದ್ದಿ

ಬೆಳ್ತಂಗಡಿ : ಅಕ್ರಮ ಮದ್ಯ ಮಾರಾಟ ಅಡ್ಡೆಗೆ ಅಬಕಾರಿ ದಳ ದಾಳಿ ಶೇಖರಿಸಿಟ್ಟಿದ್ದ ರೂ.29 ಸಾವಿರ ಮದ್ಯ ವಶಕ್ಕೆ : ಆರೋಪಿ ಬಂಧನ

ಬೆಳ್ತಂಗಡಿ : ಅಕ್ರಮವಾಗಿ ಮಾರಾಟ ಮಾಡಲು ಕೋಳಿ ಅಂಗಡಿಯಲ್ಲಿ ಮಧ್ಯವನ್ನು ಶೇಖರಿಸಿಟ್ಟಿರುವ ಬಗ್ಗೆ ಅಬಕಾರಿ ಡಿಸಿ ತಂಡಕ್ಕೆ ಬಂದ ಖಚಿತ ಮಾಹಿತಿ ಮೇರೆಗೆ ಮಂಗಳೂರು, ಬಂಟ್ವಾಳ ,ಬೆಳ್ತಂಗಡಿ ಅಬಕಾರಿ ತಂಡ ಜಂಟಿ ಕಾರ್ಯಾಚರಣೆ ನಡೆಸಿ ಅಕ್ರಮ ಮಧ್ಯ ಪತ್ತೆ ಹಚ್ಚಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಬೆಳ್ತಂಗಡಿ ತಾಲೂಕಿನ ಕಲ್ಮಂಜ ಗ್ರಾಮದ ಕೊಂಬುಗುರಿ ನಿವಾಸಿ ಲೋಕೇಶ್(36) ಎಂಬಾತನಿಗೆ ಸೇರಿದ ಕೋಳಿ ಮಾರಾಟ ಅಂಗಡಿಯಲ್ಲಿ ಮಾರಾಟ ಮಾಡುವ ಉದ್ದೇಶದಿಂದ ಮಧ್ಯವನ್ನು ಶೇಖರಿಸಿಟ್ಟ ಬಗ್ಗೆ ಮಂಗಳೂರು ಅಬಕಾರಿ ಡಿಸಿ ತಂಡಕ್ಕೆ ಮಾಹಿತಿ ಬಂದಿದ್ದು ಅದರಂತೆ ಮಂಗಳೂರು , ಬಂಟ್ವಾಳ, ಬೆಳ್ತಂಗಡಿ ಅಬಕಾರಿ ತಂಡದವರು ಏ.28 ಕ್ಕೆ ರಾತ್ರಿ 8 ಗಂಟೆಗೆ ಕಾರ್ಯಾಚರಣೆ ನಡೆಸಿದಾಗ 63.810 ಲೀಟರ್ IML ಮಧ್ಯ ಪತ್ತೆಯಾಗಿದೆ. ಇದರ ಒಟ್ಟು ಮೌಲ್ಯ 29,785 ರೂ ಅಗಿದೆ.ಅಕ್ರಮ ಮಧ್ಯವನ್ನು ವಶಪಡಿಸಿಕೊಂಡು ಆರೋಪಿ ಲೋಕೇಶ್ ನನ್ನು ಬಂಧಿಸಲಾಗಿದೆ. ಈ ಬಗ್ಗೆ ಮಂಗಳೂರು ಅಬಕಾರಿ ಇಲಾಖೆಯಲ್ಲಿ ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್ ಪ್ರಕರಣ ದಾಖಲಿಸಿದ್ದಾರೆ. ಪ್ರಕರಣದ ತನಿಖೆ ಬೆಳ್ತಂಗಡಿ ಅಬಕಾರಿ ಇಲಾಖೆ ನಡೆಸುತ್ತಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಅಬಕಾರಿ ಉಪ ಆಯುಕ್ತ ಟಿ.ಎಮ್‌.ಶ್ರೀನಿವಾಸ್ ಮಾರ್ಗದರ್ಶನದಲ್ಲಿ, ಬಂಟ್ವಾಳ ಉಪ ವಿಭಾಗದ ಅಬಕಾರಿ ಉಪಾಧೀಕ್ಷ ಸಂತೋಷ್ ಮೂಡಾಗಿ ರವರ ನೇತೃತ್ವದಲ್ಲಿ ಅಬಕಾರಿ ಡಿಸಿ ಜಿಲ್ಲಾ ತಂಡ ನಿರೀಕ್ಷಕರು ಸುನಿಲ್ ಕುಮಾರ್, ಸಬ್ ಇನ್ಸ್ಪೆಕ್ಟರ್ ವಿಶ್ವನಾಥ್, ಸಿಬ್ಬಂದಿ ಸುಪ್ರೀತ್ ಹಾಗೂ ಬೆಳ್ತಂಗಡಿ ವಲಯ ಅಬಕಾರಿ ನಿರೀಕ್ಷಕ ಲಕ್ಷ್ಮಣ್ ಉಪ್ಪಾರ್, ಸಿಬ್ಬಂದಿ ಶಬೀರ್, ಶಿವಶಂಕರ್, ಭೋಜ, ಚಾಲಕ ಯೋಗೀಶ್, ನವೀನ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದರು.

Related posts

ಜು.18ರಂದು ರಜೆ ಎಂದು ನಕಲಿ ರಜೆ ಆದೇಶ: ಸಾಮಾಜಿಕ ಜಾಲ ತಾಣಗಳಲ್ಲಿ ವೈರಲ್-ಎಫ್.ಐ.ಆರ್ ದಾಖಲಿಸಲು ಜಿಲ್ಲಾಧಿಕಾರಿ ಸೂಚನೆ

Suddi Udaya

ಬಂದಾರು ಗ್ರಾಮ ಓಟೆಚ್ಚಾರಿನಲ್ಲಿ ಒಂಟಿ ಸಲಗ ದಾಳಿ: ಅಪಾರ ಕೃಷಿ ಮತ್ತು ಸೊತ್ತುಗಳಿಗೆ ಹಾನಿ

Suddi Udaya

ಮಂಡ್ಯ ಮದ್ದೂರಿನಲ್ಲಿ ಕ್ಷುಲ್ಲಕ ಕಾರಣಕ್ಕೆ ವ್ಯಕ್ತಿಯ ಕೊಲೆ ಗ್ರಾಮಾಡಳಿತಾಧಿಕಾರಿ ಜಯಚಂದ್ರ ಮೇಲೆ ಪ್ರಕರಣ ದಾಖಲು

Suddi Udaya

ವೇಣೂರು: ಅಕ್ರಮ ಗೋ ಸಾಗಾಟ: ಆರೋಪಿಗಳು ಪೊಲೀಸರ ವಶ

Suddi Udaya

ದಿಡುಪೆ ಫಾಲ್ಸ್‌ನಲ್ಲಿ ನಿಯಮ ಉಲ್ಲಂಘನೆ; ಹೋಂಸ್ಟೇ ಮಾಲೀಕರಿಗೆ ದಂಡ

Suddi Udaya

ಮುಡುಕೋಡಿ: ನಕಲಿ ದಾಖಲೆ ಸೃಷ್ಟಿಸಿ ಆಸ್ತಿ ವಂಚನೆ ಆರೋಪ: 7 ಮಂದಿ ವಿರುದ್ದ ವೇಣೂರು ಠಾಣೆಯಲ್ಲಿ ಪ್ರಕರಣ ದಾಖಲು

Suddi Udaya
error: Content is protected !!