ಹೊಸಂಗಡಿ: ಇಲ್ಲಿಯ ಪಡ್ಡಂದಡ್ಕ ಎಂಬಲ್ಲಿ ನೂತನವಾಗಿ ಪ್ರಾರಂಭಗೊಂಡ ಶ್ರೀ ವೆಂಕಟೇಶ್ವರ ಪ್ಯೂಲ್ ಸರ್ವಿಸ್ ಇದರ ಉದ್ಘಾಟನಾ ಸಮಾರಂಭವು ಎ.30ರಂದು ನೆರವೇರಿತು.

ಉಡುಪಿ ಕಟಪಾಡಿ-ಪಡುಕುತ್ಯಾರು ಶ್ರೀಮತ್ ಜಗದ್ಗುರು ಆನೆಗುಂದಿ ಮಹಾಸಂಸ್ಥಾನ ಸರಸ್ವತೀಪೀಠದ ಪರಮಪೂಜ್ಯ ಜಗದ್ಗುರು ಅನಂತ ಶ್ರೀ ವಿಭೂಷಿತ ಕಾಳಹಸ್ತೇಂದ್ರ ಸರಸ್ವತೀ ಮಹಾಸ್ವಾಮಿಗಳು ಉದ್ಘಾಟಿಸಿ ಆಶೀರ್ವಚನ ನೀಡಿದರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಪಡ್ಯಾರಬೆಟ್ಟದ ಅನುವಂಶೀಯ ಆಡಳಿತ ಮೊಕ್ತೇಸರ ಎ. ಜೀವಂಧರ್ ಕುಮಾರ್, ಪಡ್ಡಂದಡ್ಕ ಜುಮ್ಮಾ ಮಸೀದಿ ಖತೀಬರು ಬಹು| ಖಲಂದರ್ ಬಾಖವಿ, ತಾ.ಪಂ. ಮಾಜಿ ಸದಸ್ಯ ವಿಜಯ ಗೌಡ ವೇಣೂರು ಭಾಗವಹಿಸಿದರು.
ವೇದಿಕೆಯಲ್ಲಿ ಆನಂದ ಆಚಾರ್ಯ, ಶ್ರೀಧರ ಆಚಾರ್ಯ, ಸುಂದರ ಆಚಾರ್ಯ, ಯೋಗೀಶ್ ಆಚಾರ್ಯ ಮಂಗಳೂರು, ಕೇಶವ ಆಚಾರ್ಯ ಮುಂಬೈ, ಆರ್.ಕೆ ಶಬೀರ್, ರೋಶನ್ ಉಪಸ್ಥಿತರಿದ್ದರು.
ಮಾಲಕರಾದ ಚೈತ್ರಾ ಸಂದೀಪ್ ಆಚಾರ್ಯ ರವರು ಅತಿಥಿಗಳನ್ನು ಸತ್ಕರಿಸಿ ಗೌರವಿಸಿದರು. ವಿಜಯ ಗೌಡ ಕಾರ್ಯಕ್ರಮ ನಿರೂಪಿಸಿದರು. ಪತ್ರಕರ್ತ ಹೆಚ್. ಮಹಮ್ಮದ್ ಸ್ವಾಗತಿಸಿ, ವಂದಿಸಿದರು.
ಗ್ರಾಹಕರಿಗೆ ಲಕ್ಕಿ ಕೂಪನ್:
ರೂ.3೦೦ ಪೆಟ್ರೋಲ್ ಖರೀದಿಗೆ ಲಕ್ಕಿ ಕೂಪನ್ ಹಾಗೂ ರೂ.1,000 ಡಿಸೇಲ್ ಖರೀದಿಗೆ ಲಕ್ಕಿ ಕೂಪನ್ ನೀಡಲಾಗುವುದು.
ಪ್ರಥಮ ಬಹುಮಾನ – ಸ್ಮಾರ್ಟ್ ಫೋನ್
ದ್ವಿತೀಯ ಬಹುಮಾನ – ಲ್ಯಾಪ್ ಟಾಪ್
ತೃತೀಯ ಬಹುಮಾನ – ಎಲ್.ಇ.ಡಿ. ಟಿವಿ
ಡ್ರಾ ದಿನಾಂಕ : 22 ಅಕ್ಟೋಬರ್ 2025