
ಬೆಳ್ತಂಗಡಿ: ತಾಲೂಕಿನ ಐಸಿಎಸ್‌ಇ ಪ್ರಥಮ ಶಾಲೆಯಾಗಿರುವ ಮುಂಡಾಜೆ ಕ್ರೈಸ್ಟ್ ಅಕಾಡೆಮಿ ಶಾಲೆ ವಿದ್ಯಾರ್ಥಿಗಳು ಐಸಿಎಸ್‌ಇ ಪರೀಕ್ಷೆ ಹಾಜರಾದ 11 ಮಂದಿ ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
6 ಮಂದಿ ವಿದ್ಯಾರ್ಥಿಗಳಾದ ಫಾತಿಮಾ ಹನುಫಾ, ಹಲೀಮಾ ಹೈಫಾ, ಮರಿಯಮ್ ಮಝ್ವ, ಮೋಕ್ಷಿತಾ, ಸನುಷಾ ಜೋಯ್, ತೃಷಾ ರೈ ವಿಶಿಷ್ಟ ಶ್ರೇಣಿಯಲ್ಲಿ, 5 ಮಂದಿ ವಿದ್ಯಾರ್ಥಿಗಳಾದ ಅನುಶ್ರೀ, ಫಾತಿಮಾ ಸಫಾ, ಇಶ್ರಾತ್ ಶ್ವಭಾ, ಶಿವಾನಿ ಪಿ, ಸಿದ್ದೇಶ್ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಪ್ರಾಂಶುಪಾಲರಾದ ಫಾ.ಮ್ಯಾಥ್ಯೂ ಎ.ಜೆ ಹಾಗೂ ಶಿಕ್ಷಕ ವೃಂದದವರು ಸಾಧನೆಗೈದ ವಿದ್ಯಾರ್ಥಿಗಳನ್ನು ಅಭಿನಂದಿಸಿದರು.