ನಡ: ಎ.30ರಂದು ಸುರಿದ ಭಾರಿ ಗಾಳಿ ಮಳೆಗೆ ನಡ ಗ್ರಾಮದ ಕೂತ್ರೋಟ್ಟು ಗಿರಿಜಾ ಅವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ನಡೆದಿದೆ.


ಮನೆಯಲ್ಲಿ ಗಿರಿಜಾ ಅವರ ಮಗಳು ಮತ್ತು ಅವರ ಮೊಮ್ಮಕ್ಕಳು ಇದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ಹಂಚು ಪುಡಿ ಪುಡಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದ್ದು ಅಪಾರ ಹಾನಿ ಸಂಭವಿಸಿದೆ.
ಇಂದು ನಡ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರ ತೆರವು ಕಾರ್ಯ ನಡೆಯಿತು.
ಸ್ಥಳಕ್ಕೆ ನಡ ಗ್ರಾ.ಪಂ. ನ ಅಧ್ಯಕ್ಷೆ ಮಂಜುಳಾ, ಗ್ರಾಮಕರಣೀಕ, ಹಾಗೂ ಸದಸ್ಯರಾದ ವಿಜಯ ಗೌಡ, ದಿವಾಕರ್ ಗೌಡ, ಚಂದ್ರಹಾಸ ಭೇಟಿ ನೀಡಿ ಪರಿಶೀಲನೆ ನಡೆಸಿದರು.