ಬೆಳ್ತಂಗಡಿ : ಹಾಸನ ಎಮ್.ಎಲ್.ಸಿ ಸೂರಜ್ ರೇವಣ್ಣ ಮೇ 1 ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನವನ್ನು ಪಡೆದರು.
ಬಳಿಕ ಅನ್ನಪೂರ್ಣ ಛತ್ರದಲ್ಲಿ ಸ್ನೇಹಿತರ ಜೊತೆ ಊಟ ಮಾಡಿದರು. ಧರ್ಮಸ್ಥಳದಲ್ಲಿ ಸ್ನೇಹಿತನ ಮದುವೆ ಕಾರ್ಯಕ್ರಮಕ್ಕೆ ಆಗಮಿಸಿದ ವೇಳೆ ದೇವರ ದರ್ಶನ ಪಡೆದಿರುವುದಾಗಿ ತಿಳಿಸಿದರು.