ಬೆಳ್ತಂಗಡಿ: ಬಿಜೆಪಿಗರು ಅರ್ಥವಿಲ್ಲದ ಟೀಕೆಗಳನ್ನು ಮಾಡುತ್ತಲೇ ನಮ್ಮ ಕರ್ನಾಟಕ ಕಾಂಗ್ರೆಸ್ ಪಕ್ಷವು ಘೋಷಣೆ ಮಾಡಿದ್ದ ಗ್ಯಾರಂಟಿ ಯೋಜನೆಗಳನ್ನು ಅನುಸರಿಸಿದರು. ಈಗ ಅದೇ ರೀತಿಯಲ್ಲಿ ಜಾತಿ ಗಣತಿಯನ್ನು ವಿರೋಧಿಸುತ್ತಿದ್ದ ಇವರು ಈಗ ಜಾತಿ ಗಣತಿಯನ್ನು ಮಾಡುವುದಾಗಿ ಘೋಷಿಸಿದ್ದಾರೆ.
ಅಂದಹಾಗೆ ಜಾತಿ ಗಣತಿಯು ಜಾತಿಗಳ ನಡುವೆ ಒಡಕು ಮೂಡಿಸುತ್ತದೆ ಎಂಬ ಬಾಲಿಷವಾದ ಹೇಳಿಕೆ ನೀಡಿದ್ದ ರಾಜ್ಯ ಬಿಜೆಪಿಯ ನಾಯಕರು ಮತ್ತು ಅವರ ಮಿತ್ರ ಪಕ್ಷ ಈಗ ಏನು ಹೇಳುತ್ತದೆ ಎಂಬ ಕುತೂಹಲ.
ಇನ್ನೊಂದು ಪ್ರಮುಖ ಅಂಶವೆಂದರೆ ಕಾಂಗ್ರೆಸ್ ಪಕ್ಷದ ಹಲವು ಯೋಜನೆ ಮತ್ತು ಯೋಚನೆಗಳನ್ನು ಬಿಜೆಪಿಗರು ಅನುಸರಿಸಿದ್ದಾರೆ.
ಪ್ರಧಾನಿಗಳು ಜಾತಿ ಗಣತಿ ಘೋಷಣೆಯನ್ನು ಬಿಹಾರದ ಚುನಾವಣೆಯ ಆಚೆಗೂ ತೆಗೆದುಕೊಂಡು ಹೋಗಿ ಅದಕ್ಕೆ ತಾರ್ಕಿಕ ಅಂತ್ಯ ಒದಗಿಸಬೇಕು ಮತ್ತು ಜನ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಪರಿಸ್ಥಿತಿಯ ಆಧಾರದಲ್ಲಿ ಅವರಿಗೆ ನ್ಯಾಯ ಹಂಚಿಕೆ ಮಾಡಬೇಕೆಂದು ಕೆ.ಪಿ.ಸಿ.ಸಿ ಪ್ರಧಾನ ಕಾರ್ಯದರ್ಶಿ ರಕ್ಷಿತ್ ಶಿವರಾಮ್ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.