25 C
ಪುತ್ತೂರು, ಬೆಳ್ತಂಗಡಿ
May 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿವರದಿ

ಗಾಳಿ ಮಳೆಗೆ ಕೂತ್ರೋಟ್ಟು ನಿವಾಸಿ ಗಿರಿಜಾ ಅವರ ಮನೆಗೆ ಮರ ಬಿದ್ದು ಹಾನಿ

ನಡ: ಎ.30ರಂದು ಸುರಿದ ಭಾರಿ ಗಾಳಿ ಮಳೆಗೆ ನಡ ಗ್ರಾಮದ ಕೂತ್ರೋಟ್ಟು ಗಿರಿಜಾ ಅವರ ಮನೆಗೆ ಮರ ಬಿದ್ದು ಮನೆ ಸಂಪೂರ್ಣವಾಗಿ ಹಾನಿಯಾದ ಘಟನೆ ನಡೆದಿದೆ.

ಮನೆಯಲ್ಲಿ ಗಿರಿಜಾ ಅವರ ಮಗಳು ಮತ್ತು ಅವರ ಮೊಮ್ಮಕ್ಕಳು ಇದ್ದು, ಯಾವುದೇ ಅಪಾಯ ಸಂಭವಿಸಿಲ್ಲ. ಮನೆಯ ಹಂಚು ಪುಡಿ ಪುಡಿಯಾಗಿದ್ದು, ಗೋಡೆ ಬಿರುಕು ಬಿಟ್ಟಿದ್ದು ಅಪಾರ ಹಾನಿ ಸಂಭವಿಸಿದೆ.

ಇಂದು ನಡ ಶೌರ್ಯ ವಿಪತ್ತು ನಿರ್ವಹಣಾ ತಂಡದಿಂದ ಮರ ತೆರವು ಕಾರ್ಯ ನಡೆಯಿತು.

ಸ್ಥಳಕ್ಕೆ ನಡ ಗ್ರಾ.ಪಂ. ನ ಅಧ್ಯಕ್ಷೆ ಮಂಜುಳಾ, ಗ್ರಾಮಕರಣೀಕ, ಹಾಗೂ ಸದಸ್ಯರಾದ ವಿಜಯ ಗೌಡ, ದಿವಾಕರ್ ಗೌಡ, ಚಂದ್ರಹಾಸ ಭೇಟಿ ನೀಡಿ ಪರಿಶೀಲನೆ ನಡೆಸಿದರು.

Related posts

ಕೊಲ್ಲಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವದ ಪೂರ್ವಭಾವಿ ಸಭೆ: ವಿವಿಧ ಸಮಿತಿಗಳ ರಚನೆ -ಸಂಚಾಲಕ ಹಾಗೂ ಉಪಸಂಚಾಲಕರ ಆಯ್ಕೆ

Suddi Udaya

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಭೇಟಿ: ದೇವರಿಗೆ ವಿಶೇಷ ಪೂಜೆ ಸಲ್ಲಿಕೆ

Suddi Udaya

ಇಳಂತಿಲ: ಅಮಲು ಸೇವನೆಯಿಂದ ಅನುಚಿತವಾಗಿ ವರ್ತಿಸುತ್ತಿದ್ದ ಇಬ್ಬರು ಯುವಕರು ಪೊಲೀಸರ ವಶಕ್ಕೆ

Suddi Udaya

ಕೋಳಿ ಅಂಕ ಅಪರಾಧವಾಗಿದ್ದು ಕಾನೂನು ಪಾಲಿಸುವಂತೆ ಪೊಲೀಸರಿಗೆ ಡೈರೆಕ್ಟರ್ ಜನರಲ್ ಆದೇಶ

Suddi Udaya

ನಿಡ್ಲೆ: ಬೂಡುಜಾಲು ನಿವಾಸಿ ವಿಶ್ವನಾಥ ಶೆಟ್ಟಿ ನಿಧನ

Suddi Udaya

ಭಾರತೀಯ ಜನತಾ ಪಾರ್ಟಿಯ ಜಿಲ್ಲಾ ಕಾರ್ಯದರ್ಶಿಗಳಾಗಿ ಸೀತಾರಾಮ್ ಬೆಳಾಲು ಹಾಗೂ ವಸಂತಿ ಮಚ್ಚಿನ ಆಯ್ಕೆ

Suddi Udaya
error: Content is protected !!