25 C
ಪುತ್ತೂರು, ಬೆಳ್ತಂಗಡಿ
May 2, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಗುರುವಾಯನಕೆರೆಯಲ್ಲಿ “ಆರ್ವಿಕ್” ಜ್ಯುವೆಲ್ಲರ್ಸ್ & ವರ್ಕ್ಸ್ ಶುಭಾರಂಭ

ಗುರುವಾಯನಕೆರೆ: ಇಲ್ಲಿಯ ನಿಸರ್ಗ ಆರ್ಕೇಡ್ ಕಾಂಪ್ಲೆಕ್ಸ್ನಲ್ಲಿ ಪ್ರಭಾಕರ್ ಆಚಾರ್ಯರವರ ಮಾಲಕತ್ವದ “ಆರ್ವಿಕ್” ಜ್ಯುವೆಲ್ಲರ್ಸ್ & ವರ್ಕ್ಸ್ ನೂತನ ಮಳಿಗೆ ಮೇ 1ರಂದು ಶುಭಾರಂಭಗೊಂಡಿತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಳಾಲು ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ರವರು ಉದ್ಘಾಟಿಸಿ ಶುಭಹಾರೈಸಿದರು.

ಮುಖ್ಯ ಅತಿಥಿಗಳಾಗಿ ಹೆಜಮಾಡಿ ದುರ್ಗಶ್ರೀ ಜುವೆಲ್ಲರ್‍ಸ್ ನ ಮಾಲಕ ಸುಂದರ ಬಿ., ಉಜಿರೆ ಶ್ರೀ ಶಾರದ ಮತ್ತು ಶಾಂತರಾಮ ಜುವೆಲ್ಲರ್‍ಸ್ ಮಾಲಕ ಆನಂದ ಆಚಾರ್ಯ , ಗುರುವಾಯನಕೆರೆ ನಿಸರ್ಗ ಕರ್ಟನ್ & ವಾಲ್ ಪೇಪರ್ ಮಾಲಕ ನಾಗೇಶ್ ಕೋಟ್ಯಾನ್ ಬರಾಯ ಉಪಸ್ಥಿತರಿದ್ದು, ಶುಭಹಾರೈಸಿದರು.

ಈ ಸಂದರ್ಭದಲ್ಲಿ ಸಹೋದರರಾದ ಉಜಿರೆ ಶುಭ ಜುವೆಲ್ಲರ್‍ಸ್ ನ ಮಾಲಕ ಸುಧಾಕರ ಆಚಾರ್ಯ, ದಿವಾಕರ ಆಚಾರ್ಯ, ತಾಯಿ ಲಲಿತಾ ಈಶ್ವರಪ್ಪ ಆಚಾರ್ಯ ಹಾಗೂ ಬಂಧು ಮಿತ್ರರು ಉಪಸ್ಥಿತರಿದ್ದರು. ಬಂದಂತಹ ಅತಿಥಿ ಗಣ್ಯರನ್ನು ಮಾಲಕ ಪ್ರಭಾಕರ ಆಚಾರ್ಯ ಹಾಗೂ ಶ್ರೀಮತಿ ಉಮಾ ಪ್ರಭಾಕರ ಆಚಾರ್ಯ ಸ್ವಾಗತಿಸಿ ಸತ್ಕರಿಸಿದರು.


916 ಹಾಲ್‌ಮಾರ್ಕ್ ಚಿನ್ನ-ಬೆಳ್ಳಿ ಆಭರಣ ತಯಾರಕರು ಮತ್ತು ಮಾರಾಟಗಾರರು ಆಭರಣಗಳ ಒಪ್ಪ, ಗಿಫ್ಟ್ ಐಟಂಗಳು, ದೈವ ದೇವರುಗಳ ಮೂರ್ತಿಗಳು, ಹರಕೆಯ ಸಾಧನಗಳು ಹಾಗೂ ಇತರ ಎಲ್ಲಾ ರೀತಿಯ ಚಿನ್ನ-ಬೆಳ್ಳಿಯ ಆಭರಣಗಳು ಮಳಿಗೆಯಲ್ಲಿ ಲಭ್ಯವಿರುತ್ತದೆ ಎಂದು ಮಾಲಕ ಪ್ರಭಾಕರ ಆಚಾರ್ಯ ತಿಳಿಸಿರುತ್ತಾರೆ.

Related posts

ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಆಶ್ರಯದಲ್ಲಿ ಪ್ರಕಟಿಸಿದ “ಸಿರಿ ಧಾನ್ಯ ಸಿರಿ-ಸರಿ” ಕೃತಿ ಹೇಮಾವತಿ ವೀ. ಹೆಗ್ಗಡೆಯವರಿಂದ ಬಿಡುಗಡೆ

Suddi Udaya

ಬಂದಾರು ಸರಕಾರಿ ಶಾಲೆಯಲ್ಲಿ ಪೋಷಕರಿಂದ ಶ್ರಮದಾನ

Suddi Udaya

ಧರ್ಮಸ್ಥಳ ಶ್ರೀ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಮಹಾವೀರ ಜನ್ಮ ಕಲ್ಯಾಣೋತ್ಸವ

Suddi Udaya

ಮದ್ದಡ್ಕ ಸಮೀಪದ ನೇರಳಕಟ್ಟೆಯಲ್ಲಿ ಬೈಕ್ ಮತ್ತು ಅಕ್ಟೀವಾ ಡಿಕ್ಕಿ: ಸವಾರರು ಪ್ರಾಣಾಪಾಯದಿಂದ ಪಾರು

Suddi Udaya

ಬಳಂಜ: ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿ ಹರೀಶ್ ವೈ ಆಯ್ಕೆ

Suddi Udaya

ಅಂತರ್ ಕಾಲೇಜು ಗಣಿತ ಸ್ಪರ್ಧೆ: ಎಸ್. ಡಿ. ಎಂ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಪ್ರಶಸ್ತಿ

Suddi Udaya
error: Content is protected !!