ಬೆಳ್ತಂಗಡಿ : ಜೇಸಿ ಭವನ ಬೆಳ್ತಂಗಡಿ ಇಲ್ಲಿ ಜೇಸಿಯೇತರರಿಗೆ ಒರಿಯಂಟೇಷನ್ ತರಬೇತಿ ಹಮ್ಮಿಕೊಳ್ಳಲಾಯಿತು. ಜೆಸಿಐ ಭಾರತದ ವಲಯ 15 ರ ಪೂರ್ವ ವಲಯಾಧ್ಯಕ್ಷ ಜೆಸಿಐ ಸೆನೆಟರ್ ರೋಯನ್ ಉದಯ ಕ್ರಾಸ್ತಾ ಇವರು ಜೆಸಿಐ ನಲ್ಲಿನ ವಿಫುಲ ಅವಕಾಶಗಳು ಹಾಗೂ ರಾಷ್ಟ್ರೀಯ ಅಂತರಾಷ್ಟ್ರೀಯ ಮಾಹಿತಿಯನ್ನೊಳಗೊಂಡ ತರಬೇತಿ ನಡೆಸಿಕೊಟ್ಟರು. ತರಬೇತಿ ಪಡೆದ ಜೇಸಿಯೇತರರು ಜೆಸಿಐ ಬೆಳ್ತಂಗಡಿ ಸದಸ್ಯರಾಗಿ ಸೇರ್ಪಡೆಯಾದರು ತರಬೇತುದಾರರು ನೂತನ ಸದಸ್ಯರಿಗೆ ಪ್ರಮಾಣವಚನ ಭೋದಿಸಿದರು.

ಜೆಸಿಐ ಬೆಳ್ತಂಗಡಿ ಅಧ್ಯಕ್ಷೆ ಜೇಸಿ ಆಶಾಲತಾ ಪ್ರಶಾಂತ್ ಸಭಾಧ್ಯಕ್ಷತೆ ವಹಿಸಿ ಸರ್ವರಿಗೂ ಸ್ವಾಗತ ಕೋರಿದರು. ವಲಯದ ಉಪಾಧ್ಯಕ್ಷ ಜೆ.ಎಫ್.ಎಮ್ ರಂಜಿತ್ ಎಚ್‌ಡಿ ರವರು ನೂತನ ಜೇಸಿಗಳಿಗೆ ಶುಭಾಶಯ ಸಲ್ಲಿಸಿದರು. ಮಹಿಳಾ ಜೇಸಿ ಸಂಯೋಜಕಿ ಜೇಸಿ ಚಿತ್ರಪ್ರಭ ಹಾಗೂ ಸದಸ್ಯರು ಸಭೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ಪ್ರಮೊದ್ ಕೆ ಚಿಬಿದ್ರೆ ಧನ್ಯವಾದವಿತ್ತರು.