ನಾವೂರು : ಮೂಲ್ಯರ ಯಾನೆ ಕುಲಾಲರ ಸಂಘ ನಾವೂರು ಮತ್ತು ಕುಲಾಲರ ಕ್ರೀಡಾ ಕೂಟ ಸಮಿತಿ ನಾವೂರು ಇದರ ಜಂಟಿ ಆಶ್ರಯದಲ್ಲಿ ವಲಯ ಮಟ್ಟದ ಸ್ವಜಾತಿ ಬಾಂಧವರ ಕ್ರೀಡಾಕೂಟವು ಎ. 27 ರಂದು ನಾವೂರು ಕೊಡಿಯೇಲು ಗದ್ದೆಯಲ್ಲಿ ಜರುಗಿತು.
ಉದ್ಘಾಟನೆಯನ್ನು ಕುಶಾಲಪ್ಪ ಮೂಲ್ಯ ಕೊಡಿಯೇಲು ನೆರವೇರಿಸಿ ಶುಭ ಹಾರೈಸಿದರು. ಕ್ರೀಡಾಕೂಟ ಸಮಿತಿಯ ಅಧ್ಯಕ್ಷ ಪ್ರದೀಪ್ ಕರ್ಮಿನಡ್ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಉದ್ಘಾಟನ ವೇದಿಕೆಯಲ್ಲಿ ಸದಾನಂದ ಮೂಲ್ಯ ನಾವೂರು, ಹರೀಶ್ ಕಾರಿಂಜ, ಶ್ರೀಮತಿ ಜಯಂತಿ ಕಣಾಲು, ಗ್ರಾ.ಪಂ ಸದಸ್ಯರುಗಳಾದ ಶ್ರೀಮತಿ ವೇದಾವತಿ, ಶ್ರೀಮತಿ ಪ್ರಿಯಾ ಲಕ್ಷ್ಮಣ್ ಹಾಗೂ ಗುರಿಕಾರರುಗಳಾದ ಸುಂದರ ಮೂಲ್ಯ ಭೀಮಂಡೆ ಮತ್ತು ಡಾಕಯ್ಯ ಮೂಲ್ಯ ಕಣಾಲು ಉಪಸ್ಥಿತರಿದ್ದರು.
ವಿಜಯ್ ಕುಲಾಲ್ ಸುದೇಬರಿ ಸ್ವಾಗಿತಿಸಿ , ಮಹೇಶ್ ಕುಲಾಲ್ ನಾವೂರು ವಂದಿಸಿದ ಕಾರ್ಯಕ್ರಮವನ್ನು ಕುಮಾರಿ ಪ್ರಿಯಾ ಕಾರಿಂಜ ನಿರೂಪಿಸಿದರು. ನಂತರ ವಿವಿಧ ಆಟೋಟ ಕಾರ್ಯಕ್ರಮವು ನಡೆದಿದ್ದು ಸಾಯಂಕಾಲ ಹಿರಿಯರ ಸಮ್ಮುಖದಲ್ಲಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದೊಂದಿಗೆ ಕ್ರೀಡಾಕೂಟವು ಅತ್ಯಂತ ಯಶಸ್ವಿಯೊಂದಿಗೆ ಸಂಪನ್ನಗೊಂಡಿತು. ಧರ್ಣಪ್ಪ ಮೂಲ್ಯ ನಾವೂರು ಇವರ ಮಾರ್ಗದರ್ಶನದಲ್ಲಿ ಕ್ರೀಡಾಕೂಟ ಸಮಿತಿಯ ಎಲ್ಲ ಸದಸ್ಯರು ಕ್ರೀಡಾಕೂಟದಲ್ಲಿ ಭಾಗವಹಿಸಿ ಸಹಕರಿಸಿದರು.