ಬೆಳ್ತಂಗಡಿ: ಮುಂಡಾಜೆ ಗ್ರಾಮದ ಹುರ್ತಾಜೆ ನಿವಾಸಿ ಹಿರಿಯ ಕೃಷಿಕರು ಹಾಗೂ ಮುತ್ಸದ್ದಿಯಾಗಿದ್ದ ದಿ. ಬಾಬು ಶೆಟ್ಟಿ ಅವರ ಪತ್ನಿ ಸೀತಾ ಶೆಟ್ಟಿ(90ವ.) ರವರು ವಯೋ ಸಹಜ ಅಸೌಖ್ಯದಿಂದ ಮೇ 1ರಂದು ಸ್ವಗೃಹದಲ್ಲಿ ನಿಧನರಾದರು.
ಆದರ್ಶ ಗೃಹಿಣಿಯಾಗಿದ್ದ ಅವರು ಕೊಡುಗೈ ದಾನಿಯಾಗಿದ್ದರು. ಮನೆಗೆ ಯಾರೇ ಬಂದರೂ ಅನ್ನದಾಸೋಹಗೈಯುತ್ತಿದ್ದರು.
ಮೃತರು ನಾಲ್ವರು ಪುತ್ರಿಯರಾದ ಶೋಭಾವತಿ, ಚಂದ್ರಾವತಿ, ನೀಲಾವತಿ ಮತ್ತು ಜಲಜಾಕ್ಷಿ, ಏಕೈಕ ಪುತ್ರ ಠಾಗೋರ್‌ನಾಥ್ವ ಶೆಟ್ಡಿ(ಮಧು) ಹಾಗೂ ಬಂಧುವರ್ಗದವರನ್ನು ಅಗಲಿದ್ದಾರೆ.