September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುವಂತೆ ಶಾಸಕ ಹರೀಶ್ ಪೂಂಜರಿಗೆ ಮನವಿ

ಬೆಳ್ತಂಗಡಿ: ಕರ್ನಾಟಕ ಸರಕಾರದ ವ್ಯಾಪ್ತಿಯಲ್ಲಿ ಮೆಸ್ಕಾಂ ಇಲಾಖೆಯು ರೈತರ ಕೃಷಿ ಪಂಪು ಸೆಟ್ ಸ್ಥಾವರಗಳಿಗೆ ಹೆಚ್ಚುವರಿ 15000/- ಠೇವಣಿ ವಿಧಿಸುವ ಯೋಜನೆ ಹಾಕಿಕೊಂಡಿದ್ದು, ಈಗಾಗಲೇ ಅಂದಾಜು ಪಟ್ಟಿ ತಯಾರಿಸಿ ಕಾರ್ಯದೇಶವಾದ ಯಾವುದೇ ಪಂಪು ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಆದ್ದರಿಂದ ಬೆಳ್ತಂಗಡಿ ತಾಲೂಕಿನ ಕೃಷಿಕ ಬಂಧುಗಳು ಶಾಸಕ ಹರೀಶ್ ಪೂಂಜಾ ಅವರನ್ನು ಭೇಟಿಯಾಗಿ , ತಮ್ಮ ಮನವಿಯನ್ನು ಅರ್ಪಿಸಿದರು.

ಕೃಷಿಕರು ಈಗಾಗಲೇ ಬ್ಯಾಂಕುಗಳಿಂದ ಸಾಲ ಮಾಡಿ ಅಡಿಕೆ ಹಾಗೂ ತೆಂಗು ಇನ್ನಿತರ ಕೃಷಿ ಅಭಿವೃದ್ಧಿ ಮಾಡಿದ್ದು, ಕೃಷಿ ಪಂಪು ಸೆಟ್ಟುಗಳಿಗೆ ವಿದ್ಯುತ್ ಸಂಪರ್ಕ ಸಿಗದೇ ಬಸವಳಿದಿದ್ದಾರೆ. ಈ ಮೊದಲು ಇಲಾಖೆ ನೀಡಿದ ಇಂಟಿಮೇಶನ್ ಪ್ರಕಾರ ಠೇವಣಿ ಪಾವತಿಸಿದ್ದು, ಇದೀಗ ಹೆಚ್ಚುವರಿ 15 ಸಾವಿರ ಮೊತ್ತವನ್ನು ಪಾವತಿಸಲು ಮೆಸ್ಕಾಂ ಇಲಾಖೆ ತಿಳಿಸಿರುತ್ತದೆ. ಈ ಬಗ್ಗೆ ಇಲಾಖೆ ಹಾಗೂ ಸರಕಾರದ ಮಟ್ಟದಲ್ಲಿ ಆಗ್ರಹಿಸಿ ರೈತರ ಸಮಸ್ಯೆಯನ್ನು ಪರಿಹರಿಸಲು ಪ್ರಯತ್ನಿಸಬೇಕಾಗಿ ಶಾಸಕರಿಗೆ ತಾಲೂಕಿನ ಕೃಷಿಕರ ಪರವಾಗಿ ಮನವಿ ಸಲ್ಲಿಸಲಾಯಿತು. ಈ ಬಗ್ಗೆ ಕ್ರಮ ಕೈಗೊಳ್ಳುವುದಾಗಿ ಶಾಸಕರು ತಾಲೂಕಿನ ಕೃಷಿಕರಿಗೆ ಭರವಸೆ ನೀಡಿದರು.

Related posts

ಅನಾರು ಶ್ರೀ ದುರ್ಗಾಪರಮೇಶ್ವರಿ ದೇವರ ‘ಅನಾರ್ದ ಐಸಿರಿ’ ಭಕ್ತಿಗೀತೆ ಬಿಡುಗಡೆ

Suddi Udaya

ಪೆರಿಂಜೆ ಎಸ್‌ಡಿಎಂ ಅನುದಾನಿತ ಪ್ರೌಢಶಾಲೆಗೆ ಶೇ.96 ಫಲಿತಾಂಶ

Suddi Udaya

ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನಲ್ಲಿ ಗುರು ವಸಂತ ಪ್ರೌಢಶಾಲಾ ವಿದ್ಯಾರ್ಥಿಗಳ ತಾಲೂಕು ಮಟ್ಟದ ಸ್ಪರ್ಧೆ

Suddi Udaya

ಕುತ್ಯಾರು ಶ್ರೀ ಸೋಮನಾಥೇಶ್ವರ ದೇವಸ್ಥಾನಕ್ಕೆ ಕಾಂಗ್ರೆಸ್ ಅಭ್ಯರ್ಥಿ ಪದ್ಮರಾಜ್ ಆರ್ ಭೇಟಿ

Suddi Udaya

ನಡ: ಅರಣ್ಯ ಇಲಾಖೆ, ಗ್ರಾ.ಪಂ. ನಡ ಮತ್ತು ವಿಪತ್ತು ತಂಡದ ವತಿಯಿಂದ ಗಿಡ ನೆಡುವ ಕಾರ್ಯಕ್ರಮ

Suddi Udaya

ಲಾಯಿಲ ನಡುಗುಡ್ಡೆ ಪ್ರದೇಶದ ಮರದ ಕಾಲುಸಂಕ ಮತ್ತು ಸವಣಾಲು ಹಿತ್ತಿಲಪೇಲ ನದಿಗೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಬೆಳ್ತಂಗಡಿ ನ್ಯಾಯಾಲಯಕ್ಕೆ ವಿಸ್ತೃತ ವರದಿ ಸಲ್ಲಿಕೆ

Suddi Udaya
error: Content is protected !!