25.4 C
ಪುತ್ತೂರು, ಬೆಳ್ತಂಗಡಿ
May 4, 2025
Uncategorized

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಖಂಡನೆ: ಜಿಲ್ಲಾ ಬಂದ್‌ಗೆ ಹಿಂದೂ ಸಂಘಟನೆಗಳ ಕರೆ : ಬೆಳ್ತಂಗಡಿ ತಾಲೂಕಿನ ಪೇಟೆಗಳಲ್ಲಿ ಭಾಗಶಃ ಅಂಗಡಿ-ಮುಂಗಟ್ಟುಗಳು ಬಂದ್

ಬೆಳ್ತಂಗಡಿಯಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್

ಮದ್ದಡ್ಕದಲ್ಲಿ ಅಂಗಡಿ ಮುಂಗಟ್ಟು ಬಂದ್

ಬೆಳ್ತಂಗಡಿ: ಬಜ್ಪೆಯ ಕಿನ್ನಿಪದವು ಎಂಬಲ್ಲಿ ಬಿಜೆಪಿ ಕಾರ್ಯಕರ್ತ ಸುಹಾಸ್ ಶೆಟ್ಟಿ ಎಂಬವರನ್ನು ನಿನ್ನೆ ರಾತ್ರಿ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕಡಿದು ಕೊಲೆ ನಡೆಸಿರುವುದನ್ನು ಖಂಡಿಸಿ ವಿವಿಧ ಹಿಂದೂ ಸಂಘಟನೆಗಳು ನೀಡಿದ ಜಿಲ್ಲಾ ಬಂದ್ ಕರೆಯಂತೆ ಬೆಳ್ತಂಗಡಿ ತಾಲೂಕಿನ ಉಜಿರೆ, ಧರ್ಮಸ್ಥಳ, ಗುರುವಾಯಕೆರೆ, ಮಡಂತ್ಯಾರು, ಶಿಶಿಲ ಸೇರಿದಂತೆ ಪ್ರಮುಖ ಪೇಟೆಗಳಲ್ಲಿ ಭಾಗಶಃ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿದೆ. ಕೆಲವು ಕಡೆಗಳಲ್ಲಿ ಅಂಗಡಿ ಮುಂಗಟ್ಟುಗಳು ತೆರೆದುಕೊಂಡಿದ್ದು, ಎಂದಿನಂತೆ ವ್ಯಾಪಾರ ನಡೆಸುತ್ತಿವೆ.

ಮಡಂತ್ಯಾರು ಅಂಗಡಿ ಮುಗ್ಗಟ್ಟುಗಳು ಬಂದ್

ನೆರಿಯಾದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಹಿನ್ನಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಮೇ 6 ರವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಹಿಂದೂ ಸಂಘಟನೆಗಳು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಬೆಳ್ತಂಗಡಿಯಲ್ಲಿ ವಿಶ್ವಹಿಂದೂ ಪರಿಷತ್, ಬಜರಂಗದಳ ಹಾಗೂ ಭಾರತೀಯ ಜನತಾ ಪಾರ್ಟಿ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದೆ. ತಾಲೂಕಿನ ಮಡಂತ್ಯಾರಿನಲ್ಲಿ ಅಂಗಡಿ-ಮುಂಗಟ್ಟುಗಳು ಬಹುತೇಕ ಬಂದ್ ಆಗಿದೆ. ಉಜಿರೆ ಹಾಗೂ ಬೆಳ್ತಂಗಡಿಯಲ್ಲಿ ಕೆಲವೊಂದು ಅಂಗಡಿಗಳನ್ನು ಬಿಟ್ಟರೆ ಉಳಿದವು ಬಂದ್ ಆಗಿದೆ. ಅಲ್ಲಲ್ಲಿ ಹೋಟೇಲ್‌ಗಳು ಕೆಲವೊದು ಸಣ್ಣ-ಪುಟ್ಟ ಅಂಗಡಿಗಳು ತೆರೆದುಕೊಂಡು ಎಂದಿನಂತೆ ವ್ಯಾಪಾರ ನಡೆಸುತ್ತಿವೆ.

ಉಜಿರೆಯಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್

ಶಿಶಿಲದಲ್ಲಿ ಅಂಗಡಿ ಮುಗ್ಗಟ್ಟುಗಳು ಬಂದ್

ಬಂದ್ ಕರೆ ಹಿನ್ನಲೆಯಲ್ಲಿ ತಾಲೂಕಿನಲ್ಲಿ ಬೆಳಿಗ್ಗೆ ಬಸ್‌ಗಳಿಲ್ಲದೆ ಶಾಲಾ ಕಾಲೇಜುಗಳಿಗೆ ಹೋಗುವ ಮಕ್ಕಳು ಪರದಾಟ ನಡೆಸಬೇಕಾಯಿತು. ಕೆಲವೊಂದು ಶಾಲೆಗಳಿಗೆ ಮಕ್ಕಳು ಬಂದು ಹಿಂತಿರುಗಿ ಮನೆಗೆ ಹೋಗಿದ್ದಾರೆ. ತಾಲೂಕಿನಲ್ಲಿ ಯಾವುದೇ ಅಹಿತಕರ ಘಟನೆ ನಡೆಯಂತೆ ತಾಲೂಕಿನ ಎಲ್ಲಾ ಪೊಲೀಸ್ ಠಾಣೆಯ ಪೊಲೀಸರು ಬಂದೋಬಸ್ತ್ ಕ್ರಮಗಳನ್ನು ತೆಗೆದುಕೊಂಡಿದ್ದಾರೆ.

Related posts

ಬೆಳ್ತಂಗಡಿ ಜೂನಿಯರ್ ಕಾಲೇಜಿನಲ್ಲಿ ಸಿಇಟಿ ತರಬೇತಿ ಮತ್ತು ಸ್ಪೋಕನ್ ಇಂಗ್ಲೀಷ್ ಕ್ಲಾಸ್ ಉದ್ಘಾಟನೆ

Suddi Udaya

ಪ್ರಧಾನಿ ನರೇಂದ್ರ ಮೋದಿಜೀಯವರ ಹುಟ್ಟುಹಬ್ಬದ ಪ್ರಯುಕ್ತ ಬಿಜೆಪಿ ಯುವಮೋರ್ಚಾ ಬೆಳ್ತಂಗಡಿ ಮಂಡಲ ವತಿಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Suddi Udaya

ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆಯ ನಿರ್ದೇಶಕ ಡಾ. ಐ. ಶಶಿಕಾಂತ್ ಜೈನ್ ರವರಿಗೆ ಅಂತಾರಾಷ್ಟ್ರೀಯ “ಏಷಿಯಾ ಪೆಸಿಫಿಕ್ ಐಕಾನ್ ಅವಾರ್ಡ್ಸ್” ಪ್ರದಾನ

Suddi Udaya

ನಾರಾವಿ ಲೈನ್ ಮ್ಯಾನ್ ಕಿಟ್ಟ ಯಾನೆ ಸುಧಾಕರ ಅಂಡಿಂಜೆಯ ಟಿಸಿ ಹತ್ತಿರ ಆಕಸ್ಮಿಕ ಸಾವು

Suddi Udaya

ಅ. 20 ತುಳು ಕೂಟ ಗೋವಾದಲ್ಲಿ ಉದ್ಘಾಟನಾ ಸಮಾರಂಭ

Suddi Udaya

ಬಂದಾರು ಗ್ರಾ.ಪಂ. ದ್ವಿತೀಯ ಹಂತದ ಗ್ರಾಮ ಸಭೆ

Suddi Udaya
error: Content is protected !!