ಬೆಳ್ತಂಗಡಿ: ತುಳುನಾಡಿನ ಈ ಪವಿತ್ರ ಭೂಮಿಯಲ್ಲಿ ಅಧರ್ಮಿಗಳ ಈ ರೀತಿಯ ಅಟ್ಟಹಾಸವನ್ನು ಅವರವರು ನಂಬುವ ದೇವರು ಕೂಡ ಕ್ಷಮಿಸಲ್ಲ, ಅಂತಹ ಅಧರ್ಮಿಗಳಿಗೆ ಶಿಕ್ಷೆ ತಪ್ಪಿದ್ದಲ್ಲ. ಈ ರೀತಿಯ ದುಷ್ಟರನ್ನು ದೇವರು ಶಿಕ್ಷಿಸದೇ ಬಿಡಲ್ಲ. ತುಳುನಾಡಿನಲ್ಲಿ ಧರ್ಮದ ಸಂಸ್ಥಾಪನೆಗೆ ದುಷ್ಟರ ಸಂಹಾರ ಅಗತ್ಯವಾಗಿ ಆಗಬೇಕಾಗಿದೆ.
ಧರ್ಮ ನಿಷ್ಠರ ಪರವಾಗಿ, ಅಧರ್ಮಿಗಳ ನಾಶಕ್ಕಾಗಿ, ಧರ್ಮಿಗಳ ಉಳುವಿಗಾಗಿ ಧರ್ಮನಿಷ್ಠರು ಒಂದಾಗಬೇಕಾಗಿದೆ. ಅಧರ್ಮದತೆಯ ಮನಸ್ಥಿತಿ ಇರುವ ಇಂತಹ ವ್ಯಕ್ತಿಗಳನ್ನು, ಬೆಂಬಲವಾಗಿ ಇರುವ ಸಂಘಟನೆಗಳನ್ನು, ಬೇರು ಸಹಿತ ಕಿತ್ತು ಬಿಸಾಡಬೇಕಾದ ಸಮಯ ಬಂದಿದೆ, ಇಲ್ಲದೇ ಹೋದರೆ ಇದೇ ರೀತಿ ಧರ್ಮ ನಿಷ್ಟರು ಬಲಿಯಾಗಬೇಕಾದ ಪರಿಸ್ಥಿತಿ ಬರುತ್ತದೆ, ಇಂತಹ ಅಧರ್ಮಿಗಳಿಗೆ ಬೆಂಬಲ ನೀಡುವ ರಾಜಕೀಯ ಪಕ್ಷಗಳಿಗೆ, ಸಂಘಟನೆಗಳಿಗೆ ನನ್ನ ದಿಕ್ಕಾರ, ತಕ್ಷಣ ಸಂಬಂಧ ಪಟ್ಟ ಸರಕಾರಗಳು, ಆಡಳಿತ ವರ್ಗ, ಅಧಿಕಾರಿ ವರ್ಗದವರು ಯಾವುದೇ ಮುಲಾಜಿಲ್ಲದೆ ತಮ್ಮ ರಾಜಕೀಯದ ಹಿತಾಸಕ್ತಿಯನ್ನು ಇದರಲ್ಲಿ ತರದೇ ಕ್ರಮ ತೆಗೆದು ಕೊಳ್ಳಬೇಕು, ಆ ಮೂಲಕ ಅಧರ್ಮಿಗಳಿಗೆ ತಕ್ಕ ಪಾಠ ಕಲಿಸಬೇಕು ಎಂದು ಆಗ್ರಹಿಸುತ್ತೇನೆ. ಧರ್ಮ ನಿಷ್ಠ ಮೃತ ಸುಹಾಸ್ ಶೆಟ್ಟಿ ಆತ್ಮಕ್ಕೆ ಶ್ರದ್ಧಾಂಜಲಿ ಅರ್ಪಿಸುತ್ತೇನೆ. ಮತ್ತೋರ್ವ ಕಾರ್ಯಕರ್ತನಿಗೂ ಹಲ್ಲೆಯಾಗಿದ್ದು ಶೀಘ್ರ ಗುಣಮುಖವಾಗಲೆಂದು ದೇವರಲ್ಲಿ ಪ್ರಾಥಿಸುತ್ತೇನೆ ಎಂದು ಭಾರತೀಯ ಮಜ್ದೂರು ಸಂಘ ದ.ಕ ಜಿಲ್ಲಾಧ್ಯಕ್ಷ ಅನಿಲ್ ಕುಮಾರ್ ಯು ಪತ್ರಿಕಾ ಪ್ರಕಟನೆಯಲ್ಲಿ ತಿಳಿಸಿದ್ದಾರೆ.