ಧರ್ಮಸ್ಥಳ: ಪ್ರಸಕ್ತ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ಫಲಿತಾಂಶ ಪ್ರಕಟವಾಗಿದ್ದು ಶ್ರೀ.ಧ.ಮಂ.ಆಂಗ್ಲಮಾದ್ಯಮ ಶಾಲೆ, ಧರ್ಮಸ್ಥಳದಿಂದ ಒಟ್ಟು 52 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು ಅವರಲ್ಲಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸದ್ರಿ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ.
25 ವಿದ್ಯಾರ್ಥಿಗಳು ಎ+ ಶ್ರೇಣಿಯಲ್ಲಿ, ಉಳಿದಂತೆ 16 ವಿದ್ಯಾರ್ಥಿಗಳು ‘ಎ’, 5 ವಿಧ್ಯಾರ್ಥಿಗಳು ‘ಬಿ+’, 4 ವಿದ್ಯಾರ್ಥಿಗಳು ‘ಬಿ’ ಹಾಗು 2 ವಿದ್ಯಾರ್ಥಿಗಳು ‘ಸಿ+’ ಶ್ರೇಣಿ ಪಡೆದು ಉತ್ತೀರ್ಣರಾಗಿದ್ದಾರೆ. ಎಂದು ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ ಪರಿಮಳಾ ಎಂ. ವಿ. ತಿಳಿಸಿರುತ್ತಾರೆ.
ಉನ್ನತ ಶ್ರೇಣಿಯಲ್ಲಿ ಚಿನ್ಮಯಿ ರೈ -620, ಸುಧಾಮ ಎಸ್ 620 , ವರ್ಷ ಆರ್ -620, ಅಮೃತಾ ಜೆ ಗೌಡ -೬೧೮, ಶ್ರಾವ್ಯ ಬಿ ಜೆ -೬೧೧, ಅದಿತಿ ಕೆ -೬೧೦, ಮೌಲ್ಯ ಪಿ ವಿ -೬೦೮ , ರುಕ್ಷಾಲಿ -೬೦೬, ಜೆನಿ -೬೦೩ , ಅನ್ಮಿಯಾ ಕುಂಜುಮೋನ್ -೬೦೦ -, . ಎಸ್ ಆರ್ ಚರುಷಾ – ೬೦೦ , ಸುಪ್ರಿಯಾ -೫೯೫, ತನವ್ ಅರಿಗ-೫೯೫, ಸಮೀಕ್ಷಾ ಬಿ ಎ-೫೯೩, ಸುವಿತ್ ಪಿ ರಾವ್ -೫೯೩, ಚೇತನ -೫೮೬, ಎ ಪಿ ಮಂಜುನಾಥ್ -೫೭೮ ಅಂಕವನ್ನು ಪಡೆದುಕೊಂಡಿದ್ದಾರೆ.