ಕಾಶಿಪಟ್ಣ : ಮೂರು ನಾಲ್ಕು ವರ್ಷಗಳಿಂದ ಅಸೌಖ್ಯದಿಂದ ಬಳಲುತ್ತಿದ್ದ ಆಮಂತ್ರಣ ಪರಿವಾರ ಹಾಗೂ ಸಂಸ್ಕೃತ ಸಿರಿಯ ಕಲಾ ಪೋಷಕ ಕಿಶೋರ್ ರಾವ್ ರವರು ಮೇ 1 ರಂದು ರಾತ್ರಿ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ.
ಇವರು ಎಲ್ಲಾ ರಂಗದ ಕಲಾವಿದರನ್ನು ಹಾಗೂ ಮಕ್ಕಳನ್ನು ಪ್ರೋತ್ಸಾಹ ಮಾಡುವ ಕಲಾಪೋಷಕರಾಗಿ ಚಿರಪರಿಚಿತರಾಗಿದ್ದರು.
ಕಾಶಿಪಟ್ಣ ಆದಿಶಕ್ತಿ ದೇವಸ್ಥಾನದ ಹಲವಾರು ಚಟುವಟಿಕೆಗಳಲ್ಲಿ ಸಕ್ರೀಯರಾಗಿ ಗೊಲ್ಲ ಸಮಾಜದಲ್ಲಿ ಗುರುತಿಸಿಕೊಂಡಿದ್ದರು.
ಮೃತರು ತಾಯಿ ಹಾಗೂ ಸಹೋದರಿ, ಸಹೋದರ ಹಾಗೂ ಬಂಧುವರ್ಗ, ಹಿತೈಷಿ ಕುಟುಂಬದವರನ್ನು ಅಗಲಿದ್ದಾರೆ.