ಬೆಳ್ತಂಗಡಿ ತಾಲೂಕು ಕುವೆಟ್ಟು ಗ್ರಾಮದ ಗುರುವಾಯನಕೆರೆ – ಉಪ್ಪಿನಂಗಡಿ ಮುಖ್ಯ ರಸ್ತೆಯ ಕುಲಾಲ ಮಂದಿರದ ಬಳಿ ಬ್ರಹತ್ ಮರಗಳು ರಸ್ತೆಯ ಅಂಚಿನಲ್ಲಿದ್ದು ರಸ್ತೆಗೆ ತಗುವ ರೀತಿಯಲ್ಲಿ ಇದೆ. ಗಾಳಿ ಮಳೆಗೆ ರಸ್ತೆಗೆ ಬೀಳುವ ಹಂತದಲ್ಲಿರುವ ಮರಗಳನ್ನು ಶೀಘ್ರದಲ್ಲಿ ಅರಣ್ಯ ಇಲಾಖೆ ತೆರವು ಮಾಡುವುದು ಸೂಕ್ತ ಎಂದು ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘದ ಅಧ್ಯಕ್ಷರಾದ ಹರೀಶ್ ಕಾರಿಂಜ ತಿಳಿಸಿದ್ದಾರೆ.

ಈ ರಸ್ತೆಯಲ್ಲಿ ಅಂಗನವಾಡಿ ಮಕ್ಕಳು ಶಾಲಾ ಕಾಲೇಜ್ ಮಕ್ಕಳು ಸಾರ್ವಜನಿಕರು ನಡೆದು ಕೊಂಡು ಹೋಗುತ್ತಿರುತ್ತಾರೆ. ಜೋರಾದ ಗಾಳಿ ಬೀಸಿದರೆ ರಸ್ತೆಯಲ್ಲಿ ಸಂಚಾರಿಸುವ ವಾಹನಗಳು ಮತ್ತು ಅದರಲ್ಲಿರುವ ಪ್ರಯಾಣಿಕರ ಜೀವಕ್ಕೆ ಅಪಾಯಕಾರಿ.
ಈಗಾಗಲೇ ವರ್ಷಗಳ ಹಿಂದೆಯೇ ಕುಲಾಲ ಮಂದಿರದ ಮೂಲಕ ಲಿಖಿತವಾಗಿ ಅರಣ್ಯ ಇಲಾಖೆ ಅರ್ಜಿ ಸಲ್ಲಿಸಿದ್ದು, ಮತ್ತು ತಾಲೂಕು ವಿಪತ್ತು ನಿರ್ವಹಣಾ ತಂಡಕ್ಕೆ ಕುವೆಟ್ಟು ಅಭಿವೃದ್ಧಿ ಅಧಿಕಾರಿಗಳ ಮೂಲಕ ಮಾಹಿತಿಯನ್ನು ರವನಿಸಲಾಗಿದೆ. ಈ ಬಗ್ಗೆ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ತಾಲೂಕು ಆಡಳಿತ ಎಚ್ಚೆತ್ತುಕೊಂಡು ಮರಗಳನ್ನು ಶೀಘ್ರದಲ್ಲಿ ತೆರವು ಕಾರ್ಯ ಮಾಡಬೇಕು ಎಂದು ಸಾರ್ವಜನಿಕರ ಪರವಾಗಿ ಬೆಳ್ತಂಗಡಿ ಸುದ್ದಿ ಉದಯ ಪತ್ರಿಕೆಯ ಮೂಲಕ ಎಲ್ಲಾ ಅಧಿಕಾರಿಗಳಲ್ಲಿ ಹರೀಶ್ ಕಾರಿಂಜ ವಿನಂತಿಸಿದ್ದಾರೆ.