
ಗುರುವಾಯನಕೆರೆ: ಬೆಳ್ತಂಗಡಿಯಿಂದ ಉಪ್ಪಿನಂಗಡಿ ಕಡೆಗೆ ಪ್ರಯಾಣಿಸುತ್ತಿದ್ದ ವರುಣ್ ಖಾಸಗಿ ಬಸ್ ಮೇಲೆ ಕಿಡಿಗೇಡಿಗಳು
ಕಲ್ಲೇಸದ ಘಟನೆ ಮೇ. 2ರಂದು ಬೆಳಿಗ್ಗೆ ಗುರುವಾಯನಕೆರೆ ಜೈನ್ ಪೇಟೆ ಬಳಿ ನಡೆದಿದೆ.
ಕಲ್ಲು ಹೊಡೆದ ಪರಿಣಾಮವಾಗಿ ಬಸ್ಸಿನ ಮುಂಭಾಗದ ಕನ್ನಡಿಯು ಸಂಪೂರ್ಣ ಹಾನಿಯಾಗಿದೆ ಎಂದು ಮಾಲೀಕರು ಖಚಿತ ಪಡಿಸಿದ್ದಾರೆ.
ಬಸ್ಸಿನಲ್ಲಿದ್ದ ಪ್ರಯಾಣಿಕರನ್ನು ಇತರ ವಾಹನದಲ್ಲಿ ಯಾವುದೇ ತೊಂದರೆಯಾಗದಂತೆ
ಕಳುಹಿಸಿಕೊಡಲಾಗಿದೆ ಎಂದು ತಿಳಿದು ಬಂದಿದೆ.