ಮುಂಡಾಜೆ :2024 -25ನೇ ಶೈಕ್ಷಣಿಕ ಸಾಲಿನ ಎಸ್.ಎಸ್ ಎಲ್ ಸಿ ಪರೀಕ್ಷೆಯಲ್ಲಿ ಮುಂಡಾಜೆ ಪ್ರೌಢಶಾಲೆ ಮುಂಡಾಜೆ (ಅನುದಾನಿತ )ಶಾಲೆಯಲ್ಲಿ ಪರೀಕ್ಷೆಗೆ ಹಾಜರಾದ ಒಟ್ಟು 106 ವಿದ್ಯಾರ್ಥಿಗಳಲ್ಲಿ 101 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು ಶಾಲೆಗೆ 95.28 ಶೇಕಡ ಫಲಿತಾಂಶ ದಾಖಲಾಗಿರುತ್ತದೆ.
ಶ್ರಾವಿಣಿ 610 ಅಂಕಗಳನ್ನು ಪಡೆದು ಶಾಲೆಗೆ ಪ್ರಥಮ ಸ್ಥಾನ ಪಡೆದಿರುತ್ತಾರೆ. ರಕ್ಷಾ 599 ಅಂಕವನ್ನು ಪಡೆದಕೊಂಡಿದ್ದಾರೆ.
16 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ,61 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ, 19 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ, 5 ವಿದ್ಯಾರ್ಥಿಗಳು ತೃತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ