May 3, 2025
ಕ್ರೀಡಾ ಸುದ್ದಿಚಿತ್ರ ವರದಿವರದಿ

44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ -2025ಶಿಕ್ಷಕಿ ಸೌಮ್ಯಾ ಕೆ. ಬಂಗಾಡಿ ಅವರಿಗೆ ಹಲವು ಬಹುಮಾನಗಳು

ಬೆಳ್ತಂಗಡಿ; ಏ.21ರಿಂದ 23ರವರೆಗೆ ಮೈಸೂರು ಚಾಮುಂಡಿ ವಿಹಾರ ಸ್ಟೇಡಿಯಂನಲ್ಲಿ ಜರುಗಿದ 44ನೇ ರಾಷ್ಟ್ರೀಯ ಮಾಸ್ಟರ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್ 2025 ಇದರಲ್ಲಿ ಸರಕಾರಿ ಪ್ರೌಢ ಶಾಲೆ ಕಾಶಿಪಟ್ಣ ಸಮಾಜ ವಿಜ್ಞಾನ ಶಿಕ್ಷಕಿ ಸೌಮ್ಯ. ಕೆ ಅವರು ಭಾಗವಹಿಸಿ ಹಲವು ವಿಭಾಗಗಳಲ್ಲಿ ಬಹುಮಾನಗಳನ್ನು ಗೆದ್ದುಕೊಂಡಿದ್ದಾರೆ.

ಪಂದ್ಯಾಕೂಟದ 40 ರಿಂದ 45 ವರ್ಷ ವಯೋಮಾನದವರ ಸ್ಪರ್ಧೆಯ 200ಮೀ ಹರ್ಡಲ್ಸ್ ಪ್ರಥಮ, ಉದ್ದಜಿಗಿತ ಪ್ರಥಮ, 400 ಮೀ ದ್ವೀತಿಯ, 200 ಮೀ ದ್ವೀತಿಯ, 4*400 ರಿಲೇ ಪ್ರಥಮ, 4*100 ರಿಲೇ ಪ್ರಥಮ, 4*100 ಮಿಕ್ಸೆಡ್ ರಿಲೇ ತೃತೀಯ ಸ್ಥಾನ ಪಡೆಯುವ ಮೂಲಕ ಅಪೂರ್ವ ಕ್ರೀಡಾ ಸಾಧನೆ ಮೆರೆದಿದ್ದಾರೆ.

ಇವರ ಈ ಸ್ಪೂರ್ತಿದಾಯಕ‌ ಕ್ರೀಡಾ ಭಾಗವಹಿಸುವಿಕೆ ಕ್ರೀಡಾ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಗಿದೆ. ಇವರು ಬಂಗಾಡಿ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಎನ್ ಲಕ್ಷ್ಮಣ ಗೌಡ ಅವರ ಪುತ್ರಿ.

Related posts

ಅ.26-27: ಬೆಳ್ತಂಗಡಿಯಲ್ಲಿ ಕೋಲ್ಕತ್ತ ಸಾರಿ ಮೇಳ

Suddi Udaya

ನಾರಾವಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಕ್ಕೆ ನಿರ್ದೇಶಕರಾಗಿ ಸಹಕಾರ ಭಾರತಿ ಅಭ್ಯರ್ಥಿ ಉಮೇಶ್.ಎಂ.ಕೆ ಅವಿರೋಧವಾಗಿ ಆಯ್ಕೆ

Suddi Udaya

ಮಾಚಾರು: ಬದನಾಜೆ ಶ್ರೀ ಲಕ್ಷ್ಮೀ ನಾರಾಯಣ ಭಜನಾ ಮಂಡಳಿಯ 45ನೇ ವರ್ಷದ ಶಾರದಾ ಪೂಜೆ

Suddi Udaya

ಮಡಂತ್ಯಾರಿನಲ್ಲಿ ‘ಸರ್ಕಾರದ ನಡೆ ಕಾರ್ಯಕರ್ತರ ಕಡೆ ‘ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಪೂರ್ವಭಾವಿ ಸಭೆ

Suddi Udaya

ಸೌಜನ್ಯ ಕೊಲೆ ಪ್ರಕರಣವನ್ನು ಹಾಲಿ ನ್ಯಾಯಾಧೀಶರ ಮುಖಾಂತರ ನ್ಯಾಯಾಂಗ ತನಿಖೆಗೆ ವಹಿಸಲು ರಾಜ್ಯ ಮತ್ತು ಕೇಂದ್ರ ಸರಕಾರಕ್ಕೆ ವಿ.ಹಿಂ.ಪಂ ಆಗ್ರಹ

Suddi Udaya

ವಾಣಿ ಶಿಕ್ಷಣ ಸಂಸ್ಥೆ: ಸ್ಕೌಟ್ ಮತ್ತು ಗೈಡ್ಸ್- ಬೇಸಿಗೆ ಶಿಬಿರ

Suddi Udaya
error: Content is protected !!