ಬೆಳ್ತಂಗಡಿ: ಕಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಳ ಸಂಜೆ ಸುರಿದ ಭಾರಿ ಗಾಳಿ ಮಳೆಗೆ ಬೃಹತ್ ಗಾತ್ರದ ಮರ ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡಚಣೆ ಉಂಟಾದ ಘಟನೆ ಮೇ.2 ರಂದು ನಾಳದಲ್ಲಿ ನಡೆದಿದೆ.

ಸ್ಥಳೀಯರು ಹಾಗೂ ಅರಣ್ಯ ಇಲಾಖೆ ಸಿಬ್ಬಂದಿಗಳ ಸಹಾಯದಿಂದ ರಸ್ತೆಯಿಂದ ಮರವನ್ನು ತೆರವು ಗೊಳಿಸುವ ಕೆಲಸ ನಡೆಯಿತು.ನ್ಯಾಯತರ್ಪು, ಕಳಿಯ ಗ್ರಾಮದ ಹಲವಾರು ಕಡೆಗಳಲ್ಲಿ ಬಾರಿ ಪ್ರಮಾಣದ ಗಾಳಿ, ಮಳೆಯಾಗಿದೆ.ತೆಂಗು, ಅಡಿಕೆ, ಬಾಳೆ ಕೃಷಿ ತೋಟಗಳಲ್ಲಿ ಅಪಾರ ಪ್ರಮಾಣದ ನಷ್ಟು ಉಂಟಾಗಿದೆ.

ಮನೆ, ದನಗಳ ಹಟ್ಟಿ ಮತ್ತು ಸೋಲಾರ್ ಪ್ಯಾನಲ್ ಗಳು ಗಾಳಿ ರಭಸಕ್ಕೆ ನೂರಾರು ಮೀಟರ್ ದೂರ ಹಾರಿ ಹೋಗಿದೆ. ಸುಮಾರು 15ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ತುಂಡಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾದ ಘಟಕಗಳು ನಡೆಯಿತು.