ಬೆಳ್ತಂಗಡಿ ಎಸ್.ಡಿ.ಎಮ್ ಆಂಗ್ಲ ಮಾಧ್ಯಮ ಶಾಲೆಗೆ ಸತತ ಹತ್ತನೇ ಬಾರಿ ಶೇ. 100 ಫಲಿತಾಂಶ ದಾಖಲಾಗಿದೆ.
ಪರೀಕ್ಷೆಗೆ ಹಾಜರಾದ 52 ವಿದ್ಯಾರ್ಥಿಗಳ ಪೈಕಿ 52 ವಿದ್ಯಾರ್ಥಿಗಳು ಉತ್ತೀರ್ಣರಾಗಿರುತ್ತಾರೆ. 15 ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ , 10 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ ಮತ್ತು 25 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಸನ್ನಿಧಿ ಎಸ್ ಹೆಗ್ಡೆ 618 ಅಂಕಗಳೊಂದಿಗೆ ಶಾಲೆಗೆ ಪ್ರಥಮ ಸ್ಥಾನ, ಸುಯಾಷ್ ಪ್ರಭು 617 ದ್ವಿತೀಯ ಸ್ಥಾನ, ನಿಧಿ ಎಸ್ ದೇವಾಡಿಗ 613, ಯಶಸ್ ಡಿ ಶೆಟ್ಟಿ 613 ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ದಿಯಾ 610, ಖುಷಿ ಆರ್ 609, ಮೊಹಮ್ಮದ್ ಸುಹಾನ್ 608, ಆಯುಷ್ ಕೆ.606 ಅಂಕವನ್ನು ಪಡೆದುಕೊಂಡಿದ್ದಾರೆ.