September 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಪ್ರಮುಖ ಸುದ್ದಿಬೆಳ್ತಂಗಡಿ

ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆಯಾಗಬೇಕು : ಶಾಸಕ ಹರೀಶ್ ಪೂಂಜ ಆಗ್ರಹ

ಬೆಳ್ತಂಗಡಿ: ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದನ್ನು ಖಂಡಿಸುತ್ತೇನೆ. ಈ ಕೃತ್ಯಕ್ಕೆ ನೇರ ಪೊಲೀಸ್ ಇಲಾಖೆ ಹಾಗೂ ಕಾಂಗ್ರೆಸ್ ಸರ್ಕಾರ ಕಾರಣ, ಈ ಪ್ರಕರಣವನ್ನು ರಾಷ್ಟ್ರೀಯ ತನಿಖಾ ತಂಡದಿಂದ ತನಿಖೆ ನಡೆಸಿ, ಇದರ ಹಿಂದೆ ಯಾರಿದ್ದಾರೆ ಎಂಬುದನ್ನು ಪತ್ತೆ ಹಚ್ಚಬೇಕು ಎಂದು ಬೆಳ್ತಂಗಡಿ ಕ್ಷೇತ್ರದ ಶಾಸಕ ಹರೀಶ್ ಪೂಂಜ ಒತ್ತಾಯಿಸಿದ್ದಾರೆ.


ಸುಹಾಸ್ ಮತ್ತು ಸಂಗಡಿಗರ ವಾಹನವನ್ನು ಪ್ರತೀ ನಿತ್ಯ ತಪಾಸಣೆಯನ್ನು ಮಾಡಿ, ಅವರಲ್ಲಿ ಯಾವುದೇ ರೀತಿಯಾದಂತಹ ಆತ್ಮ ರಕ್ಷಣೆಗಾಗಿ ಬೇಕಾದಂತಹ ವಸ್ತುವನ್ನು ಇಡದ ರೀತಿಯಲ್ಲಿ ಪೊಲೀಸ್ ಇಲಾಖೆ ಕಳೆದ ಒಂದು ತಿಂಗಳಿನಿಂದ ಬೆನ್ನು ಬಿದ್ದಿದೆ. ಇದರ ಹಿಂದೆ ಯಾವ ಯೋಚನೆ ಪೊಲೀಸ್ ಇಲಾಖೆಗೆ ಇದೆ ಎಂಬುವುದನ್ನು ಹರೀಶ್ ಪೂಂಜ ಪ್ರಶ್ನೆಸಿದ್ದಾರೆ.


ಒಂದು ಸಿನಿಮಾ ಮಾದರಿ ರೀತಿಯಲ್ಲಿ ದುಷ್ಕರ್ಮಿಗಳು ಸುಹಾಸ್ ಶೆಟ್ಟಿಯವರನ್ನು ಕೊಲೆ ನಡೆಸಿ, ಅಟ್ಟಹಾಸವನ್ನು ಮೆರೆದಿದ್ದಾರೆ. ಒಬ್ಬ ಕಾರ್ಯಕರ್ತನನ್ನು ವಿನಾಕಾರಣ ಹತ್ಯೆ ಮಾಡಿರುವಂತಹದ್ದು ಖಂಡಿತ ಹಿಂದೂ ಸಮಾಜ ಇದನ್ನು ಸಹಿಸಿಕೊಂಡು ಕುಳಿತುಕೊಳ್ಳುವುದಿಲ್ಲ. ಪೊಲೀಸ್ ಇಲಾಖೆ ಹಾಗೂ ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ಕಾರ್ಯಕರ್ತನ ಹತ್ಯೆಗೆ ಸೂಚನೆ ಇದೇ ಎನ್ನುವಂತಹದ್ದನ್ನು ತಿಳಿದುಕೊಳ್ಳದಷ್ಟು, ಕಾನೂನು ಸುವ್ಯವಸ್ಥೆ ಈ ರಾಜ್ಯದಲ್ಲಿ ಹದಗೆಟ್ಟಿದೆ ಎಂಬುವುದು ಈ ಪ್ರಕರಣದ ಮೂಲಕ ಗಮನಕ್ಕೆ ಬಂದಿದೆ. ಹಿಂದೂ ಕಾರ್ಯಕರ್ತರ ರಕ್ಷಣೆಗೋಸ್ಕರ ನಾವು ಖಂಡಿತ ಬದ್ಧರಿದ್ದೇವೆ. ಈ ಹತ್ಯೆಗೆ ನೇರವಾಗಿ ಪೊಲೀಸ್ ಇಲಾಖೆ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಪೊಲೀಸ್ ಇಲಾಖೆಗೆ ಮಾಹಿತಿ ಇದ್ದರೂ, ಈ ರೀತಿ ನಿರ್ಲಕ್ಯ ವಹಿಸಿರುವುದು ಈ ಕೃತ್ಯಕ್ಕೆ ಕಾರಣವಾಗಿದೆ. ರಾಜ್ಯ ಸರಕಾರದಿಂದ ನಡೆಯುವ ತನಿಖೆಯ ಮೇಲೆ ನಮಗೆ ವಿಶ್ವಾಸ ಇಲ್ಲ ಇದನ್ನು ರಾಷ್ಟ್ರೀಯ ತನಿಖಾ ತಂಡದಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಹರೀಶ್ ಪೂಂಜ ಒತ್ತಾಯಿಸಿದ್ದಾರೆ.

Related posts

ಉಜಿರೆ ಗ್ರಾ.ಪಂ. ನೂತನ ಅಧ್ಯಕ್ಷರಾಗಿ ಉಷಾ ಕಾರಂತ್, ಉಪಾಧ್ಯಕ್ಷರಾಗಿ ರವಿ ಕುಮಾರ್ ಆಯ್ಕೆ

Suddi Udaya

ವೇಣೂರು: ಚಂದಯ್ಯ ದೇವಾಡಿಗ ನಿಧನ

Suddi Udaya

ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಬೆಳ್ತಂಗಡಿ ಸಮಿತಿ ವಿನೂತನ ಮಾದರಿಯಲ್ಲಿ ತನ್ನ ತಾಲೂಕು ಅಧಿವೇಶನದ ಆಹ್ವಾನ ಪತ್ರಿಕೆ ಅನಾವರಣ

Suddi Udaya

ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಜಾತ್ರೋತ್ಸವ

Suddi Udaya

ನಾಪತ್ತೆಯಾಗಿದ್ದ ಬೆಳಾಲು ಮಾಯಾ ಅತ್ರಿಜಾಲು ತಮ್ಮಯ್ಯ ಗೌಡರ ಮೃತ‌ದೇಹ ಕೆರೆಯಲ್ಲಿ ಪತ್ತೆ- ಶವ ಮೇಲೆತ್ತಿದ‌ ಶೌಯ೯ ವಿಪತ್ತು ತಂಡ

Suddi Udaya

ತುಮಕೂರು ಮೂವರ ಹತ್ಯೆ ಪ್ರಕರಣ: ವಕ್ಫ್ ಜಿಲ್ಲಾ ಸಲಹಾ ಸಮಿತಿ ಪದಾಧಿಕಾರಿಗಳು, ಕಾಜೂರು ಆಡಳಿತ ಸಮಿತಿ ಭೇಟಿ: ಸಾಂತ್ವಾನ ಮತ್ತು ಸಹಾಯದ ಭರವಸೆ

Suddi Udaya
error: Content is protected !!