ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕವರದಿ

ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಸುರ್ಯ ಶ್ರೀ ಸದಾಶಿವ ದೇವಾಸ್ಥಾನದಲ್ಲಿ ಜಾತ್ರೋತ್ಸವ

ನಡ: ಮಣ್ಣಿನ ಹರಕೆಯ ಪ್ರಖ್ಯಾತ ಕ್ಷೇತ್ರ ಶ್ರೀ ಸದಾಶಿವರುದ್ರ ದೇವಸ್ಥಾನ ಸುರ್ಯದಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ಹಾಗೂ ವರ್ಷಾವಧಿ ಜಾತ್ರಾ ಮಹೋತ್ಸವವು ಮಾ.27ರಿಂದ ವಿದ್ಯುಕ್ತವಾಗಿ ಆರಂಭಗೊಂಡಿದೆ.

ಮಾ.27ರಂದು ಸುರ್ಯ ಶ್ರೀ ಸದಾಶಿವರುದ್ದ ದೇವರ ಸನ್ನಿಧಿಯಲ್ಲಿ ಪ್ರತಿಷ್ಠಾ ವಾರ್ಷಿಕೋತ್ಸವ ನಡೆಯಲಿದೆ. ಬೆಳಿಗ್ಗೆ ಗಣಪತಿ ಹೋಮ, ಕಲಶಪೂಜೆ, ಕಲಶಾಭಿಷೇಕ ಮಹಾಪೂಜೆ, ರಾತ್ರಿ ರಂಗಪೂಜೆ ವಿಜೃಂಭಣೆಯಿಂದ ನಡೆಯಿತು.

ಮಾ.28ರಂದು ಇಂದು ಬೆಳಿಗ್ಗೆ ಮಹಾಪೂಜೆ, ನಿತ್ಯಬಲಿ, ಅನ್ನಸಂತರ್ಪಣೆ, ಸಂಜೆ ಸುರ್ಯಗುತ್ತು ಮನೆಯಿಂದ ದೈವಗಳ ಭಂಡಾರ ತಂದು ಉತ್ಸವ ಹಾಗೂ ವಸಂತಕಟ್ಟೆ ಪೂಜೆ ನಡೆಯಲಿದೆ. ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ನವೀನ್ ಡಿ. ಪಡೀಲ್, ಭೋಜರಾಜ್ ವಾಮಂಜೂರು ನಟಿಸುವ ಹಾಸ್ಯಮಯ ನಾಟಕ ಪುದರ್ ದೀತಿಜಿ ಪ್ರದರ್ಶನಗೊಳ್ಳಲಿದೆ. ಮಾ.30ರಂದು ಬೆಳಿಗ್ಗೆ ಸೊಡರ ಬಲಿ ಉತ್ಸವ, ರಾತ್ರಿ ಕರೆಕಟ್ಟೆ ಪೂಜೆ ನಡೆಯಲಿದೆ. ರಾತ್ರಿ ಅಭಿನಯ ಕಲಾವಿದರು ಉಡುಪಿ ಇವರಿಂದ ಶಾಂಭವಿ ಹಾಸ್ಯಮಯ ನಾಟಕ ಜರುಗಲಿದೆ. ಮಾ.31ರಂದು ಬೆಳಿಗ್ಗೆ ದರ್ಶನ ಬಲಿ ಉತ್ಸವ, ಸಂಜೆ ಪುಷ್ಪರಥೋತ್ಸವ, ನೃತ್ಯಬಲಿ, ರಥಕಟ್ಟೆ ಪೂಜೆ, ಮಹಾಪೂಜೆ ಭೂತಬಲಿ ಶಯನೋತ್ಸವ ಕಾರ್ಯಕ್ರಮ ನಡೆಯಲಿದೆ. ರಾತ್ರಿ ಸಂಗಮ ಕಲಾವಿದರು ಉಜಿರೆ ಇವರಿಂದ ಮಾಸ್ಟ್ರ್ ಮನಿಪುಜೆರ್ ಹಾಸ್ಯಮಯ ನಾಟಕ ಪ್ರದರ್ಶನ ಗೊಳ್ಳಲಿದೆ. ಎ.1ರಂದು ಕವಾಟೋದ್ಧಾಟನೆ, ಕಲಶಾಭಿಷೇಕ, ಮಹಾಪೂಜೆ ಸಂಜೆ ಯಾತ್ರಾಹೋಮ, ಅವಭೃತ ಸ್ನಾನ ಮೊದಲಾದ ಕಾರ್ಯಕ್ರಮಗಳು ನಡೆಯಲಿದೆ.

ಕ್ಷೇತ್ರದ ಅನುವಂಶಿಕ ಆಡಳಿತ ಮೋಕ್ತೇಸರಾದ ಡಾ. ಸತೀಶ್ಚಂದ್ರ ಸುರ್ಯಗುತ್ತು, ಅಭಿವೃದ್ಧಿ ಮಂಡಳಿ ಅಧ್ಯಕ್ಷ ರಾಜಶೇಖರ ಅಜ್ರಿ, ಮುನಿರಾಜ ಅಜ್ರಿ, ನಿವೃತ್ತ ಸಿಂಡಿಕೇಠ್ ಬ್ಯಾಂಕ್ ಮ್ಯಾನೇಜರ್ ಸೂರ್ಯನಾರಾಯಣ ಭಟ್, ವೈಶಾಕ್ ಬಲ್ಲಾಳ್, ತಿಮ್ಮಪ್ಪ ಗೌಡ ಕಡೆಂತ್ಯಾರ್, ಪ್ರಧಾನ ಅರ್ಚಕ ಪದ್ಮನಾಭ ತಂತ್ರಿ, ದೇವಸ್ಥಾನದ ವ್ಯವಸ್ಥಾಪಕ ಪ್ರಸಾದ್ ಮತ್ತಿರರು ಉಪಸ್ಥಿತರಿದ್ದರು.

Related posts

ವಾಣಿ ಶಿಕ್ಷಣ ಸಂಸ್ಥೆಯಲ್ಲಿ 78ನೇ ಸ್ವಾತಂತ್ರ್ಯೋತ್ಸವ ಆಚರಣೆ

Suddi Udaya

ಆನೆ ಹಾವಳಿ ನಿಯಂತ್ರಣಕ್ಕೆ ತುರ್ತು ಕ್ರಮ ಕೈಗೊಳ್ಳುವಂತೆ ಜಯರಾಮ ನೆಲ್ಲಿತ್ತಾಯ ರವರಿಂದ ಜಿಲ್ಲಾಧಿಕಾರಿಗಳಿಗೆ ಮನವಿ

Suddi Udaya

ಭಾರತ ಕಬಡ್ಡಿ ತಂಡದ ನಾಯಕ ಪವನ್ ಶೆಹ್ರಾವತ್ ಅಳದಂಗಡಿಗೆ ಆಗಮಿಸುವ ಹಿನ್ನೆಲೆ ಕಬಡ್ಡಿ ಅಸೋಸಿಯೇಷನ್ ನಿಂದ ಜಂಟಿ ಸಮಾಲೋಚನಾ ಸಭೆ

Suddi Udaya

ಪಡಂಗಡಿಯಲ್ಲಿ ಗ್ರಾಮೀಣ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಎಲ್.ಸಿ. ಆರ್. ಇಂಡಿಯನ್ ವಿದ್ಯಾ ಸಂಸ್ಥೆಯಲ್ಲಿ ಶಾಲಾ ಪ್ರಾರಂಭೋತ್ಸವದ ಸಂಭ್ರಮಾಚರಣೆ

Suddi Udaya

ರಾವ್ ಒಪ್ಟಿಕಲ್ಸ್ ಮಾಲಕ ಅಶೋಕ್ ಎಲ್. ರಾವ್ ನಿಧನ

Suddi Udaya
error: Content is protected !!