ಗ್ರಾಮಾಂತರ ಸುದ್ದಿಚಿತ್ರ ವರದಿಧಾರ್ಮಿಕವರದಿ

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ: ಧಾರ್ಮಿಕ ಸಭಾ ಉದ್ಘಾಟನಾ ಸಮಾರಂಭ

ನಡ: ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ನರಸಿಂಹಗಡ ನಡ ಗ್ರಾಮ ಇದರ ವತಿಯಿಂದ ನಡ ಗ್ರಾಮದ ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂದಿರದ ವಠಾರದಲ್ಲಿ ಮೇ 3-4ರಂದು ನಡೆಯುವ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದ ಧಾರ್ಮಿಕ ಸಭಾ ಉದ್ಘಾಟನಾ ಸಮಾರಂಭವು ಮೇ 3ರಂದು ರಾತ್ರಿ 7:30 ರಂದು ನಡೆಯಿತು.

ಧಾರ್ಮಿಕ ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಉಜಿರೆ ಲಕ್ಷ್ಮೀ ಇಂಡಸ್ಟ್ರೀಸ್ ಕನಸಿನ ಮನೆ ಮಾಲಕ ಕೆ. ಮೋಹನ್ ಕುಮಾರ್ ಉದ್ಘಾಟಿಸಿ ಮಾತನಾಡಿದರು.ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಅಧ್ಯಕ್ಷ ಡಾ. ಪ್ರದೀಪ್ ಎ. ಅಧ್ಯಕ್ಷ ತೆಯನ್ನು ವಹಿಸಿದ್ದರು. ಬಂಗಾಡಿ ಸಿ.ಎ. ಬ್ಯಾಂಕ್ ಮಾಜಿ ಅಧ್ಯಕ್ಷ ಲಕ್ಷ್ಮಣ ಗೌಡ ಇರ್ತಿಲಾಲ್, ಪಡ್ಪು ಹಾ.ಉ.ಸಂಘದ ಅಧ್ಯಕ್ಷ ಪ್ರವೀಣ್ ವಿ.ಜಿ. ಮಾತನಾಡಿ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ತುಳು ಭಕ್ತಿಗೀತೆ ಬಿಡುಗಡೆ ಹಾಗೂ ನೃತ್ಯ ಭಜನಾ ಮಾರ್ಗದರ್ಶಕರಿಗೆ ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಬ್ರಹ್ಮಶ್ರೀ ಕೊಯ್ಯೂರು ನಂದಕುಮಾರ್ ತಂತ್ರಿ, ತಿಮ್ಮಪ್ಪ ಗೌಡ ಕಡ್ತ್ಯರು, ನಡ ಗ್ರಾಮ ಪಂಚಾಯತ್ ಅಧ್ಯಕ್ಷೆ ಮಂಜುಳಾ, ನಾವೂರು ಶ್ರೀ ಗೋಪಾಲಕೃಷ್ಣ ದೇವಸ್ಥಾನದ ಪೂರ್ವಾಧ್ಯಕ್ಷ ಉಮೇಶ್ ಹತ್ಯಡ್ಕ, ಸಮಿತಿ ಕೋಶಾಧಿಕಾರಿಗಳಾದ ಪುರುಷೋತ್ತಮ್ ಶೆಣೈ, ಚೆನ್ನಕೇಶವ ಗೌಡ ಬೋಜಾರ, ಉದ್ಯಮಿ ಜಯಂತ್ ಗೌಡ, ಸುಭಾಶ್ಚಂದ್ರ ಎನ್.ಬಿ., ಅಧ್ಯಕ್ಷರು, ವಿ.ಹಿಂ.ಪ. ನಡ, ಕುಶಾಲಪ್ಪ ಗೌಡ ಅಧ್ಯಕ್ಷರು, ಶ್ರೀ ಲಕ್ಷ್ಮೀನರಸಿಂಹ ಭಜನಾ ಮಂಡಳಿ, ನರಸಿಂಹಗಡ, ನಡ, ತುಕರಾಮ ಗೌಡ, ಬೋಜಾರ ಪ್ರಗತಿಪರ ಕೃಷಿಕರು, ಶಾಮ್ ಸುಂದರ್, ಗಣೇಶ್ ಗೌಡ ಉಪಸ್ಥಿತರಿದ್ದರು.

ಸುಚಿತ್ರಾ ಮತ್ತು ಬಳಗ ಪ್ರಾರ್ಥಿಸಿದರು. ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಸಮಿತಿ ಉಪಾಧ್ಯಕ್ಷ ಅಜಿತ್‌ ಕುಮಾರ್ ಆರಿಗಾ ಸ್ವಾಗತಿಸಿದರು, ಪ್ರಧಾನ ಕಾರ್ಯದರ್ಶಿ ಕರುಣಾಕರ ಗೌಡ ಬೋಜಾರ ವಂದಿಸಿದರು.

Related posts

ಶಿವಮೊಗ್ಗದಲ್ಲಿ ನಡೆದ ಭಗವದ್ಗೀತಾ ಕಂಠಪಾಠ ಸ್ಪರ್ಧೆ: ಕು. ಅದ್ವಿತಿ ರಾವ್ ದ್ವಿತೀಯ ಸ್ಥಾನ

Suddi Udaya

ಜೀಪು ಚಾಲಕ ಮಾಲಕರ ಸಂಘದಿಂದ ದಿ. ಯಾದವ ಕಾಟ್ಲ ರವರ ಮನೆಯವರಿಗೆ ಆರ್ಥಿಕ ನೆರವು

Suddi Udaya

ಅವಾಚ್ಯ ಶಬ್ದಗಳಿಂದ ನಿಂದನೆ ಆರೋಪ: ತಿಮರೋಡಿ ವಿರುದ್ಧ ಎರಡನೇ ಪ್ರಕರಣ ದಾಖಲು

Suddi Udaya

ರಾಜ್ಯ ಮಟ್ಟದ ಪೊಲೀಸ್‌ ಇಲಾಖಾ ಕ್ರೀಡಾಕೂಟ: ಪೋರ್ಟ್ರೇಟ್ ಪಾರ್ಲೆ ಟೆಸ್ಟ್ ನಲ್ಲಿ ಬೆಳ್ತಂಗಡಿ ವೃತ್ತ ನಿರೀಕ್ಷಕರ ಕಚೇರಿಯ ವಿಜಯಕುಮಾ‌ರ್ ರೈ ತೃತೀಯ ಸ್ಥಾನ

Suddi Udaya

‘ರಾಜ್ಯ ಜ್ಯೂನಿಯರ್‌ ಅಥ್ಲೆಟಿಕ್ಸ್‌ ಗೆ’ ಸೇಕ್ರೆಡ್‌ ಹಾರ್ಟ್‌ ಕಾಲೇಜಿನ ವಿದ್ಯಾರ್ಥಿ ಪುನೀತ್‌ ಕುಮಾರ್‌ ಆಯ್ಕೆ

Suddi Udaya

ಓಡೀಲು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಜಾತ್ರಾಮಹೋತ್ಸವ: ತೋರಣ ಮುಹೂರ್ತ, ಧ್ವಜಾರೋಹಣ

Suddi Udaya
error: Content is protected !!