ಕಕ್ಯಪದವು: 2024-25 ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ವಿಭಾಗದ ವಾರ್ಷಿಕ ಪರೀಕ್ಷೆಯಲ್ಲಿ ಶೇ. 100 ಫಲಿತಾಂಶ ಪಡೆದಿರುತ್ತದೆ.
ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ತೆರ್ಗಡೆಗೊಂಡಿದ್ದು ವಿದ್ಯಾರ್ಥಿನಿ ಪ್ರಾರ್ಥನಾ ಹೆಚ್ ಕೆ 622 ಅಂಕಗಳನ್ನು ಪಡೆದು ಪ್ರಥಮ ಸ್ಥಾನ, ಹಾಗೂ ರಾಜ್ಯಕ್ಕೆ 4ನೇ ರ‍್ಯಾಂಕ್, ಅತಿಶಯ್ ಆರ್ ಪೂಜಾರಿ 610 ಅಂಕಗಳನ್ನು ಪಡೆದು ದ್ವಿತೀಯ ಸ್ಥಾನ, ಹಾಗೂ ದೀಪ್ತಿ ಕೆ 609 ಅಂಕಗಳನ್ನು ಪಡೆದು ತೃತೀಯ ಸ್ಥಾನವನ್ನು ಪಡೆದಿರುತ್ತಾರೆ. ಒಟ್ಟಾರೆ 17 ವಿದ್ಯಾರ್ಥಿಗಳು ವಿಶಿಷ್ಟ ಶ್ರೇಣಿ ಯಲ್ಲಿ, 12 ಪ್ರಥಮ ಶ್ರೇಣಿಯಲ್ಲಿ 3 ದ್ವಿತೀಯ ಶ್ರೇಣಿ ಪಡೆದು ತೆರ್ಗಡೆಗೊಂಡಿರುತ್ತಾರೆ.