ಬೆಳ್ತಂಗಡಿ: ವಗ್ಗ ಕಾಯರಡ್ಕ ನಿವಾಸಿ ಮೋಹನ್ ನಾಯಕ್ (71 ವರ್ಷ ) ರವರು ಮೇ 02 ರಂದು ಅಲ್ಪ ಕಾಲದ ಅಸೌಖ್ಯದಿಂದ ನಿಧನರಾಗಿದ್ದಾರೆ.
ಇವರು ಕರ್ನಾಟಕ ಪಾಲಿಟೆಕ್ನಿಕ್ ಮಂಗಳೂರು ಹಾಗೂ ಶ್ರೀ ವಿಶ್ವೇಶ್ವರಯ್ಯ ಪಾಲಿಟೆಕ್ನಿಕ್ ಭದ್ರಾವತಿ ಇಲ್ಲಿ ಸುಮಾರು 35 ವರ್ಷ ಅಧ್ಯಾಪಕರಾಗಿ ಸೇವೆ ಸಲ್ಲಿಸಿರುತ್ತಾರೆ. ಬೆಳ್ತಂಗಡಿ ರೋಟರಿ ಕ್ಲಬ್ ಹಾಗೂ ಬೆಳ್ತಂಗಡಿ ಜೇಸಿ ಸಂಸ್ಥೆಯ ಪೂರ್ವಾಧಕ್ಷರಾದ ದಯಾನಂದ ನಾಯಕ್ ಇವರ ಬಾವ.
ಮೃತರು ಪತ್ನಿ ವಿದ್ಯಾ ನಾಯಕ್, ಮಕ್ಕಳಾದ ದಿವ್ಯಾ ನಾಯಕ್ ಹಾಗೂ ಭವ್ಯ ನಾಯಕ್ ಹಾಗೂ ಬಂಧು ಬಳಗ ದವರನ್ನು ಅಗಲಿದ್ದಾರೆ.