ಬೆಳ್ತಂಗಡಿ: ತೆಕ್ಕಾರು ದೇವರಗುಡ್ಡೆ ಭಟ್ರಬೈಲು ಶೀ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಮೇ. 3 ರಂದು ನಡೆಯಿತು. ಬ್ರಹ್ಮಶ್ರೀ ವೇದಮೂರ್ತಿ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ನೇತೃತ್ವದಲ್ಲಿ ನೆರವೇರಿಸಲಾಯಿತು.

ವೈದಿಕ ಕಾರ್ಯಕ್ರಮದ ಭಾಗವಾಗಿ ಕವಾಟೋದ್ಘಾಟನೆ, ತೈಲಾಭ್ಯಂಗನ, ಉಷ: ಪೂಜೆ, ಪರಿಕಲಶಾಭಿಷೇಕ, ಬ್ರಹ್ಮಕಲಶಾಭಿಷೇಕ ಮಹಾಪೂಜೆ ಮಂತ್ರಾಕ್ಷತೆ, ಪಲ್ಲ ಪೂಜೆ ಮತ್ತು ಪ್ರಸಾದ ಭೋಜನ ನಡೆಯಿತು.

ಬ್ರಹ್ಮಕಲಶೋತ್ಸವ ಸಮಿತಿ ಸಂಚಾಲಕ ಶಾಸಕ ಹರೀಶ್ ಪೂಂಜ, ಅಧ್ಯಕ್ಷ ಶಶಿಧರ ಶೆಟ್ಟಿ ಬರೋಡ, ಕಾರ್ಯಾಧ್ಯಕ್ಷ ಲಕ್ಷ್ಮಣ್ ಭಟ್ರಬೈಲು, ಗೌರವಾಧ್ಯಕ್ಷ ಎಸ್. ಗಣೇಶ್ ರಾವ್, ಪ್ರಧನಾ ಕಾರ್ಯದರ್ಶಿ ಪ್ರವೀಣ್ ರೈ, ಕೋಶಾಧಿಕಾರಿ ಅಣ್ಣು ಪೂಜಾರಿ ಬಾಗ್ಲೋಡಿ, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ತುಕಾರಾಮ ಬಿ.ನಾಯಕ್, ಕಾರ್ಯಾಧ್ಯಕ್ಷ ನವೀನ್ ನೆರಿಯ, ಮಂಗಳೂರಿನ ಖ್ಯಾತ ವಾಸ್ತು ತಜ್ಞ ರಾಜ್ ಕುಮಾರ್ ಗೌರಿ ಶಕ್ತಿನಗರ , ಫ್ರೇಂಡ್ಸ್ ತೆಕ್ಕಾರು ಸ್ಥಾಪಕಾಧ್ಯಕ್ಷ ತುಳಸಿಧರ್ ವಿ. ಕೋಟ್ಯಾನ್, ಬನ್ನೆಂಗಳ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಗುಣಾಕರ್ ಅಗ್ನಾಡಿ, ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷ ತುಂಗಪ್ಪ ಬಂಗೇರ, ತೆಕ್ಕಾರು ಪ್ಯಾಕ್ಸ್ ಉಪಾಧ್ಯಕ್ಷ ಶೇಖರ್ ಪೂಜಾರಿ ಮತ್ತು ಮೊದಲಾದವರು ಉಪಸ್ಥಿತರಿದ್ದರು.