ಮೊಗ್ರು: ಪ್ರಸಕ್ತ 2024-25 ನೇ ಸಾಲಿನ ಎಸ್. ಎಸ್. ಎಲ್. ಸಿ ಫಲಿತಾಂಶ ಪ್ರಕಟವಾಗಿದ್ದು ಸ. ಪ್ರೌಢಶಾಲೆ ಬುಳೇರಿಮೊಗ್ರು ಇಲ್ಲಿನ 21 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಎಲ್ಲರೂ ಉತ್ತೀರ್ಣರಾಗುವ ಮೂಲಕ ಶಾಲೆಗೆ ಶೇ.100 ಫಲಿತಾಂಶ ಬಂದಿರುತ್ತದೆ.
7 ವಿದ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 11 ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 3 ವಿದ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ. ಉನ್ನತ ಶ್ರೇಣಿಯಲ್ಲಿ ಕು. ಗ್ರೀಷ್ಮಾ-613, ಸಬೀದಾ ಮರ್ಯಮ್-604, ದಿವ್ಯಶ್ರೀ-574, ಧೃತಿ-573, ಪೃಥ್ವಿ-566, ರಾಮಕೃಷ್ಣ-542, ಅರುಣ್ ಕುಮಾರ್-535 ಅಂಕಗಳನ್ನು ಪಡೆದುಕೊಂಡು ಶಾಲೆಗೆ ಕೀರ್ತಿಯನ್ನು ತಂದಿರುತ್ತಾರೆ. ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಕರುಣಾಕರ. ಎಚ್.ಎಸ್ ಹಾಗೂ ಶಿಕ್ಷಕ ವೃಂದದವರು ಶುಭ ಹಾರೈಸಿದ್ದಾರೆ.