24.1 C
ಪುತ್ತೂರು, ಬೆಳ್ತಂಗಡಿ
May 7, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಧಾರ್ಮಿಕಬೆಳ್ತಂಗಡಿ

ಇಂದಬೆಟ್ಟು ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ವರ್ಷಾವಧಿ ಜಾತ್ರೆ ಹಾಗೂ ಪ್ರತಿಷ್ಠಾ ಮಹೋತ್ಸವ, ಧಾರ್ಮಿಕ ಸಭೆ

ಇಂದಬೆಟ್ಟು: ಶ್ರೀ ಅರ್ಧನಾರೀಶ್ವರ ದೇವಸ್ಥಾನ ದೇವನಾರಿ ಇಂದಬೆಟ್ಟು ವರ್ಷಾವಧಿ ಜಾತ್ರೆ ಹಾಗೂ ಪ್ರತಿಷ್ಠಾ ಮಹೋತ್ಸವವು ಮೇ. 4ರಂದು ಪ್ರಾರಂಭಗೊಂಡು ಮೇ.8ರವರೆಗೆ ನಡೆಯುತ್ತಿದೆ.

ಮೇ 5 ರಂದು ನಡೆದ ಧಾರ್ಮಿಕ ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದೇವಸ್ಥಾನದ ಆಡಳಿತ ಅಧಿಕಾರಿ ಗಿರಿಯಪ್ಪ ಗೌಡ ವಹಿಸಿದ್ದರು. ಬೆಳ್ತಂಗಡಿಯ ವಕೀಲರಾದ ಬಿ.ಕೆ ಧನಂಜಯ ರಾವ್ ಧಾರ್ಮಿಕ ಉಪನ್ಯಾಸ ನೀಡಿದರು. ಮುಖ್ಯ ಅತಿಥಿಗಳಾಗಿ ಧಾರ್ಮಿಕ ಪರಿಷತ್ ಮಾಜಿ ಸದಸ್ಯ ದೇವೇಂದ್ರ ಹೆಗ್ಡೆ ಕೊಕ್ರಾಡಿ, ಶ್ರೀ ಗೋಪಾಲಕೃಷ್ಣ ದೇವಸ್ಥಾನ ನಾವೂರು ಇದರ ಅಧ್ಯಕ್ಷರು ಹಾಗೂ ಬಂಗಾಡಿ ಸಿಎ ಬ್ಯಾಂಕ್ ಅಧ್ಯಕ್ಷ ಹರೀಶ್ ಸಾಲ್ಯಾನ್ ಆಗಮಿಸಿದ್ದರು.


ಜಾತ್ರೋತ್ಸವ ಸಮಿತಿಯ ಗೌರವಾಧ್ಯಕ್ಷ ಡಾ. ಪ್ರದೀಪ್ ಎ. ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸತೀಶ್ ಮನ್ನಡ್ಕ ಕಾರ್ಯಕ್ರಮ ನಿರೂಪಿಸಿದರು. ಜಾತ್ರೋತ್ಸವ ಸಮಿತಿಯ ಅಧ್ಯಕ್ಷ ವಸಂತ ಗೌಡ ಕಲ್ಲಾಜೆ ಧನ್ಯವಾದವಿತ್ತರು. ಶಾಸಕ ಹರೀಶ್ ಪೂಂಜರವರು ಆಗಮಿಸಿ ದೇವರ ದರ್ಶನ ಪಡೆದು ಬಲಿ ಉತ್ಸವದಲ್ಲಿ ಪಾಲ್ಗೊಂಡಿದ್ದರು.

Related posts

ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಇಬ್ಬರು ನಿವೃತ್ತ ಡಿಜಿಪಿಗಳ ಭೇಟಿ

Suddi Udaya

ಎ.28: ಬೆಳ್ತಂಗಡಿ ತಾಲೂಕು ಮಹಿಳಾ ಮಂಡಲಗಳ ಒಕ್ಕೂಟದ ಸಭಾಂಗಣದ ಉದ್ಘಾಟನೆ

Suddi Udaya

ಸೂಳಬೆಟ್ಟುವಿನಲ್ಲಿ ರಸ್ತೆಗೆ ಅಡ್ಡಲಾಗಿ ಬಿದ್ದ ಬೃಹತ್ ಗಾತ್ರದ ಮರ: ಮರ ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿದ ಅರಣ್ಯ ಇಲಾಖೆ ಹಾಗೂ ಸ್ಥಳಿಯರು

Suddi Udaya

ಯುವವಾಹಿನಿ ಬೆಳ್ತಂಗಡಿ ಘಟಕದ ನೂತನ ಪದಾಧಿಕಾರಿಗಳ ಪದಪ್ರಧಾನ ಸಮಾರಂಭ

Suddi Udaya

ಮುಂಡಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಸಾಧನೆಗೆ ಸಾಧನಾ ಪ್ರಶಸ್ತಿ

Suddi Udaya

ಮಾ.10: ಮೂಲ್ಕಿಯಲ್ಲಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ “ಬೆಳ್ಳಿ ಹಬ್ಬ ಸಂಭ್ರಮ”: ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಕುವೆಟ್ಟು,ಓಡಿಲ್ನಾಳ ಗ್ರಾಮ ಸಮಿತಿಯಿಂದ ಸಮಾಲೋಚನೆ ಸಭೆ ಹಾಗೂ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya
error: Content is protected !!