ವೇಣೂರು: ಇಲ್ಲಿಸಮೀಪದ ಕುಂಡದಬೆಟ್ಟು ಜುಮಾ ಮಸೀದಿಯ ವಠಾರದಲ್ಲಿ ಅಂತ್ಯ ವಿಶ್ರಾಂತಿ ಹೊಂದಿರುವ ಕುಂಡದಬೆಟ್ಟು ಉಸ್ತಾದ್ ಎಂದೇ ಪ್ರಖ್ಯಾತಿ ಹೊಂದಿರುವ ವಲಿಯುಲ್ಲಾಹಿ ಇಬ್ರಾಹಿಂ ಉಸ್ತಾದ್(ನ.ಮ) ರವರ 51 ಉರೂಸ್ ಮೇ 1,2,3 ರಂದು ಬಹಳ ವಿಜೃಂಭಣೆಯಿಂದ ನಡೆಯಿತು

.ಜುಮಾ ಮಸೀದಿ ಅಧ್ಯಕ್ಷರಾದ ಮುತ್ತಲಿಬ್ ಧ್ವಜಾರೋಹಣ ನೆರವೇರಿಸುವ ಮೂಲಕ ಉರೂಸ್ ಗೆ ಚಾಲನೆ ನೀಡಿದರು.ಸಯ್ಯಿದ್ ಝೈನುಲ್ ಆಬಿದೀನ್ ಕಾಜೂರು ತಂಙಳ್, ಸಯ್ಯಿದ್ ಅಬ್ದುರ್ರಹ್ಮಾನ್ ಸಾದಾತ್ ತಂಙಳ್,ಡಾ.ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಳಕಟ್ಟೆ,ಶಾಫಿ ಸಅದಿ ಬೆಂಗಳೂರು,ಮಸೂದ್ ಸಅದಿ ಗಂಡಿಬಾಗಿಲು,ಹನೀಫ್ ಸಖಾಫಿ ಕುಂಡದಬೆಟ್ಟು,ತೌಸೀಫ್ ಸಅದಿ ಉಳ್ತೂರು,ಮನ್ಸೂರ್ ಸಖಾಫಿ ಗೋಳಿಯಂಗಡಿ ಮುಂತಾದ ಧಾರ್ಮಿಕ ಸಾದಾತ್ ಗಳು,ಉಲಮಾಗಳು ಭಾಗವಹಿಸಿದ್ದರು.ಸೌಹಾರ್ದ ಸಂಗಮದಲ್ಲಿ ಫಾದರ್ ಜೋಸೆಫ್ ವಲಿಯಪರಂಬಿಲ್ ಕುಂಡದಬೆಟ್ಟು ಚರ್ಚ್,ಕೆಪಿಸಿಸಿ ಸಂಯೋಜಕರಾದ ಕಾವು ಹೇಮನಾಥ ಶೆಟ್ಟಿ,ಜಿಲ್ಲಾ ಪಂಚಾಯತ್ ಮಾಜಿ ಸದಸ್ಯರಾದ ಶೇಖರ್ ಕುಕ್ಕೇಡಿ,ಕುಕ್ಕೇಡಿ-ನಿಟ್ಟಡೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷರಾದ ಜನಾರ್ದನ ಪೂಜಾರಿ,ಮಾಜಿ ಉಪಾಧ್ಯಕ್ಷರಾದ ಅಶೋಕ್ ಪಾಣೂರು,ಭರತ್ ರಾಜ್ ಸಿಎ ಬ್ಯಾಂಕ್ ವೇಣೂರು,ಪುಲಾಬೆ ಮಸೀದಿ ಅಧ್ಯಕ್ಷರಾದ ಆಲಿಯಬ್ಬ,ಹೈದರ್ ಅಲಿ ಉದ್ಯಮಿ ಬೆಳ್ತಂಗಡಿ,ಖಾಲಿದ್ ಪುಲಾಬೆ,ಇರುವೈಲ್ ಮಸೀದಿ ಅಧ್ಯಕ್ಷರಾದ ಅಬ್ದುಲ್ ಮಜೀದ್,ಹೊಸಂಗಡಿ ಮಸೀದಿ ಅಧ್ಯಕ್ಷರಾದ ಖಾಲಿದ್
ಮೊದಲಾದವರು ಕಾರ್ಯಕ್ರಮದಲ್ಲಿ ಶುಭ ಹಾರೈಸಿದರು.
ಉಳ್ತೂರು ಮಸೀದಿ ಅಧ್ಯಕ್ಷರಾದ U.ಅಬ್ಬಾಸ್ ಹಾಜಿ,ಗೋಳಿಯಂಗಡಿ ಮಸೀದಿ ಅಧ್ಯಕ್ಷರಾದ ಹಸೈನಾರ್,ಹುಣ್ಸೆಪಲ್ಕೆ ಮಸೀದಿ ಅಧ್ಯಕ್ಷರಾದ B.K.ಅಬ್ಬಾಸ ಹಾಜಿ ಕುಂಡದಬೆಟ್ಟು ಮಸೀದಿ ಉಪಾಧ್ಯಕ್ಷರಾದ ಅಶ್ರಫ್ ಅಸರ್,ಪ್ರಧಾನ ಕಾರ್ಯದರ್ಶಿ ಕೆ.ವೈ.ಇಸ್ಮಾಯಿಲ್ ಜೊತೆ ಕಾರ್ಯದರ್ಶಿ ಅಬೂಬಕರ್ ಹಂದೇವು,ಕೋಶಾಧಿಕಾರಿ ಹೈದರ್ ಅಮೈ,ಮದ್ರಸ ಉಸ್ತುವಾರಿ ಅಬುಸಾಲಿ ಉಪಸ್ಥಿತರಿದ್ದರು.