ನೆರಿಯ: ಮಂಗಳೂರು ರಿಫೈನರಿ ಮತ್ತು ಪೆಟ್ರೋಕೆಮಿಕಲ್ಸ್ ಲಿಮಿಟೆಡ್ (MRPL) ಹಾಗೂ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ, ಬಿ.ವಿ.ಕೆ ಇರ್ವತ್ರಾಯ ಮೆಮೋರಿಯಲ್ ಚಾರಿಟೇಬಲ್ ಫೌಂಡೇಶನ್ ಇವರ ಸಂಯುಕ್ತ ಆಶ್ರಯದಲ್ಲಿ “ಜನಜಾತಿಯ ಗೌರವ ದಿವಸ್.”
ವನವಾಸಿ ಜನನಾಯಕ ಅಪ್ರತಿಮ ದೇಶಭಕ್ತ “ಭಗವಾನ್ ಬಿರ್ಸಾ ಮುಂಡಾ ಅವರ 150ನೇ ಜನ್ಮ ವಾರ್ಷಿಕೋತ್ಸವದ ನೆನಪಿಗಾಗಿ ಗೌರವ ಸ್ಮರಣಾರ್ಥ”. “ಉಚಿತ ಆರೋಗ್ಯ ತಪಾಸಣೆ ಶಿಬಿರ”ವು ಮೇ 16 ರಂದು ಬೆಳಿಗ್ಗೆ 10:00 ರಿಂದ ಮಧ್ಯಾಹ್ನ 1:30 ರವರೆಗೆ ಸಮುದಾಯ ಭವನ ಬಾಂಜಾರುನಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಡಾ| ರುಡಾಲ್ಫ್ ನೊರೊನ್ಹಾ ನೆರವೇರಿಸಲಿದ್ದಾರೆ. ಅಧ್ಯಕ್ಷತೆಯನ್ನು ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ಆಡಳಿತ ನಿರ್ದೇಶಕರು ಡಾ.ಮುರಳಿಕೃಷ್ಣ ಇರ್ವತ್ರಾಯ ವಹಿಸಲಿದ್ದಾರೆ. ಮುಖ್ಯ ಅತಿಥಿಗಳಾಗಿ ಕಕ್ಕಿಂಜೆ ಶ್ರೀ ಕೃಷ್ಣ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕರು ಡಾ.ವಂದನಾ ಎಂ ಇರ್ವತ್ರಾಯ, ನೆರಿಯ ಗ್ರಾಮ ಪಂಚಾಯತ್ ಸದಸ್ಯ ಅಶೋಕ್ ಬಿ.ಎಸ್, ನವೀನ್ ಬಿ.ಎಸ್ ಬಾಂಜಾರು ಭಾಗವಹಿಸಲಿದ್ದಾರೆ.
ಶಿಬಿರದ ಉಚಿತ ಸೌಲಭ್ಯ ಗಳು:
ತಜ್ಞವೈದ್ಯರ (ಫಿಸಿಶಿಯನ್) ತಪಾಸಣೆ ಮತ್ತು ಸೂಕ್ತ ಸಲಹೆ., ರಕ್ತದೊತ್ತಡ (BP) ತಪಾಸಣೆ, ಹಿಮೋಗ್ಲೋಬಿನ್ (HB)ತಪಾಸಣೆ,
ಮಧುಮೇಹ (RBS)ತಪಾಸಣೆ, ಇಸಿಜಿ (ECG), ಶ್ವಾಸಕೋಶದ ತಪಾಸಣೆ, ಜೀವನ ಶೈಲಿ ಮತ್ತು ಪಥ್ಯ ಆಹಾರ ಬಗ್ಗೆ ಸಮಾಲೋಚನೆ.
ಶಿಬಿರದಲ್ಲಿ ಭಾಗವಹಿಸುವ ಮುಖ್ಯ ತಜ್ಞವೈದ್ಯರುಗಳಾದ ಡಾ.ಮುರಳಿಕೃಷ್ಣ ಇರ್ವತ್ರಾಯ, ಡಾ.ವಂದನಾ ಎಂ ಇರ್ವತ್ರಾಯ, ಡಾ.ಅಲ್ಬಿನ್ ಜೋಸೆಫ್, ಡಾ.ಮೌಲ್ಯ.
ಹೆಚ್ಚಿನ ವಿವರಗಳಿಗೆ:9483525100/8762540383