ಮೇಲಂತಬೆಟ್ಟು ಸರಕಾರಿ ಪ್ರಥಮ ದರ್ಜೆ ಕಾಲೇಜಿನ 2005ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳು 18 ವರ್ಷಗಳ ಆನಂತರ ಒಟ್ಟು ಸೇರಿ ಚಿಂತಿಸಿ, ವಿಶೇಷವೂ ವಿಭಿನ್ನವೂ ಆದ “ಸ್ನೇಹ ಸಮ್ಮಿಲನ” ಕಾರ್ಯಕ್ರಮವು ಮೇ 10 ರಂದು ಬೆಳಿಗ್ಗೆ 9.30ಕ್ಕೆ ಕಾಲೇಜಿನ ಸಭಾಂಗಣದಲ್ಲಿ ನಡೆಯಲಿದೆ.
ಅವರ ಚಿಂತನೆಯ ಫಲವಾಗಿ ‘ಸ್ನೇಹ ಸಮ್ಮಿಲನ’ ಎಂಬ ಸಮಾರಂಭವೊಂದು ಕಾರ್ಯರೂಪಕ್ಕೆ ಬಂದಿದೆ. ಸ್ನೇಹ ಸಮ್ಮಿಲವೆಂಬುದು ಸಾಮಾನ್ಯ ಆರ್ಥದಲ್ಲಿ ಉಂಡು-ತಿಂದು ಸಂಭ್ರಮಿಸುವ ಕಾರ್ಯಕ್ರಮವಾಗಿದ್ದು, ಹಾಗಾಗದೆ ಧನಾತ್ಮಕ ಫಲಶೃತಿ ಒದಗುವ ಕಾರ್ಯಕ್ರಮವಾಗಬೇಕೆಂದು ರಕ್ತದಾನ, ನೇತ್ರದಾನ, ಅನ್ನದಾಸೋಹ, ಗುರುವಂದನೆ ಮತ್ತು ಬಡ ಹತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕಾಗಿ ವಿದ್ಯಾರ್ಥಿವೇತನಗಳೆಂಬ 5 ವಿಶೇಷ ವಿಷಯಗಳನ್ನು ಒಳಗೊಂಡು ಈ ಸಮಾರಂಭವು ವಿನೂತನ ಕಾರ್ಯಕ್ರಮವಾಗಿ ಮೂಡಿಬರಲಿದೆ.