37.1 C
ಪುತ್ತೂರು, ಬೆಳ್ತಂಗಡಿ
May 8, 2025
Uncategorized

ಆಪರೇಷನ್ ಸಿಂಧೂರ: ಉಜಿರೆಯಲ್ಲಿ ಪಟಾಕಿ ಸಿಡಿಸಿ ಸಂಭ್ರಮಾಚರಣೆ

ಉಜಿರೆ: ಜಮ್ಮು-ಕಾಶ್ಮೀರದ ಪಹಲ್ಲಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಭಾರತದ ಸೇನೆ ಪಾಕಿಸ್ತಾನದ ಉಗ್ರರ ವಿರುದ್ಧ ಆಪರೇಷನ್ ಸಿಂಧೂರ ಎಂಬ ಹೆಸರಿನಲ್ಲಿ ಮೇ 7ರ ಮಧ್ಯರಾತ್ರಿ ಪ್ರತೀಕಾರ ಆರಂಭಿಸಿದೆ. ಈ ನಿಟ್ಟಿನಲ್ಲಿ ಉಜಿರೆಯ ಸರ್ಕಲ್ ನಲ್ಲಿ ತ್ರಿವರ್ಣ ಧ್ವಜ ಹಾರಿಸಿ, ಭಾರತೀಯ ಸೇನೆಗೆ ಜಯ ಘೋಷಗಳನ್ನು ಕೂಗಿ, ಪಟಾಕಿಯನ್ನು ಸಿಡಿಸಿ, ಸಿಹಿ ಹಂಚುವುದರ ಮೂಲಕ ಸಂಭ್ರಮಾಚರಣೆಯನ್ನು ಆಚರಿಸಲಾಯಿತು.

ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್ ಮಾತನಾಡಿ, ಪಹಲ್ಗಮ್ ನಲ್ಲಿ ನಡೆದ ಅಮಾನುಷ ಕೃತ್ಯ ನೇರವಾಗಿ ಪಾಕಿಸ್ತಾನದಿಂದ ಪ್ರಾಯೋಗಿಕವಾದಂತಹ ಹತ್ಯೆ. ಸಂಪೂರ್ಣ ಭಾರತ ಸರಿಯಾದ ಉತ್ತರಕ್ಕಾಗಿ ಕಾತುರದಿಂದ ಕಾಯುತ್ತಿತ್ತು. ಈ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಆಪರೇಷನ್ ಸಿಂಧೂರದ ಮೂಲಕ ಉಗ್ರರ ಒಂಬತ್ತು ತರಬೇತಿ ತಾಣಗಳನ್ನು ದ್ವ0ಸಮಾಡುವುದರ ಮೂಲಕ ತಕ್ಕ ಉತ್ತರವನ್ನು ನೀಡಿದೆ ಎಂದರು.

ಉಜಿರೆ ಗ್ರಾ.ಪಂ. ಅಧ್ಯಕ್ಷೆ ಉಷಾಕಿರಣ್ ಮಾತನಾಡಿ, ಉಗ್ರರು ಮಹಿಳೆಯರ ಎದುರು ಹೇಯ ಕೃತ್ಯವನ್ನು ಮಾಡುವ ಮೂಲಕ ಅವರ ಆತ್ಮ ವಿಶ್ವಾಸವನ್ನು ಕುಗ್ಗಿಸುವ ಕೆಲಸವನ್ನು ಮಾಡಿದ್ದಾರೆ. ಅದಕ್ಕೆ ತಕ್ಕ ಉತ್ತರವನ್ನು ಪ್ರಧಾನ ಮಂತ್ರಿ ಹಾಗೂ ಭಾರತೀಯ ಸೇನೆ ಆಪರೇಷನ್ ಸಿಂಧೂರದ ಮೂಲಕ ಕೊಟ್ಟಿರುವಂತಹದ್ದು ಬಹಳ ಸಂತೋಷ ತಂದಿದೆ ಎಂದರು.

ಈ ಸಂದರ್ಭದಲ್ಲಿ ಉಜಿರೆ ವರ್ತಕರ ಸಂಘದ ಅಧ್ಯಕ್ಷ ಅರವಿಂದ ಕಾರಂತ್, ರವೀಂದ್ರ ಶೆಟ್ಟಿ ಬಳಂಜ, ಉದಯ್ ಚಿಕನ್ ಸೆಂಟರ್ ನ ರಾಮಚಂದ್ರ ಶೆಟ್ಟಿ, ಅಜಯ್ ಶೆಟ್ಟಿ, ಉಜಿರೆ ಮಹಾಲಕ್ಷ್ಮೀ ಫ್ಯಾನ್ಸಿ ಮಾಲಕ ಭರತ್, ಪದ್ಮಶ್ರೀ ಎಂಟರ್ ಪ್ರೈಸಸ್ ನ ಮಾಲಕ ಪದ್ಮನಾಭ ಶೆಟ್ಟಿಗಾರ್, ತ್ರಿಶುಲ್, ರಾಜೇಶ್, ಪಂಚಾಯತ್ ಸದಸ್ಯರಾದ ಗುರುಪ್ರಸಾದ್, ಸವಿತಾ, ಸಂಧ್ಯಾ, ಪ್ರಮೀಳಾ, ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Related posts

ಉಜಿರೆ: ಉಮೇಶ್ ಮುಂಡತ್ತೋಡಿ ರವರ ಮನೆಗೆ ಬಿಜೆಪಿ ಎಸ್.ಸಿ ಮೋರ್ಚಾದ ಪದಾಧಿಕಾರಿಗಳ ಭೇಟಿ

Suddi Udaya

ಭರತನಾಟ್ಯ ಜೂನಿಯರ್ ಪರೀಕ್ಷೆ: ಉಜಿರೆಯ ಸೃಷ್ಟಿ ಆಚಾರ್ಯ ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ

Suddi Udaya

ಬೆಳ್ತಂಗಡಿ: ದ.ಕ.ಜಿ.ಪ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲಾ ಪ್ರಾರಂಭೋತ್ಸವ

Suddi Udaya

ಕನ್ಯಾಡಿ ಗುತ್ತು ಮನೆಯ ಅಚ್ಚುತರಾವ್ ಮತ್ತಿಲ ನಿಧನ

Suddi Udaya

ಬೆಳ್ತಂಗಡಿಯಲ್ಲಿ ಮಿಡ್ಲ್ ಕ್ಲಾಸ್ ಫ್ಯಾಮಿಲಿ ಚಿತ್ರತಂಡ

Suddi Udaya

ಉಜಿರೆ ಶ್ರೀ ಧ.ಮಂ. ಮಹಿಳಾ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ವೃತ್ತಿ ಮಾರ್ಗದರ್ಶನ ಕಾರ್ಯಾಗಾರ ಹಾಗೂ ಪ್ರಶಿಕ್ಷಣ ಕಾರ್ಯಕ್ರಮ

Suddi Udaya
error: Content is protected !!