37.1 C
ಪುತ್ತೂರು, ಬೆಳ್ತಂಗಡಿ
May 8, 2025
ರಾಷ್ಟ್ರೀಯ ಸುದ್ದಿ

ತ್ಯಾಗ ಬಲಿದಾನಗಳು ನಮಗೆ ಹೊಸದಲ್ಲ”

ಭಾರತದ ಕ್ಷಾತ್ರ ಪರಂಪರೆಗೆ ಸುದೀರ್ಘವಾದ ಇತಿಹಾಸವಿದೆ. ಇಲ್ಲಿನ ಜನರ ನರನಾಡಿಗಳಲ್ಲಿ ಹರಿಯುವ ರಕ್ತದ ಕಣಕಣದಲ್ಲಿಯೂ ವೀರತ್ವ ತುಂಬಿಕೊಂಡಿದೆ.ಆದರೆ ಈ ದೇಶ ಶಾಂತಿಗೆ ನೀಡಿದಷ್ಟು ಮಹತ್ವ ಜಗತ್ತಿನ ಮತ್ತ್ಯಾವ ದೇಶದಲ್ಲಿಯೂ ನೋಡಲಾರೆವು.

ವಿಶ್ವಕ್ಕೆ ಶಾಂತಿಮಂತ್ರ ಕಲಿಸಿದ ಋಷಿವರ್ಯರ ನಾಡಿದು. “ವಸುದೈವ ಕುಟುಂಬಕಂ” ಎಂಬ ಮಹಾಮಂತ್ರ ಸಾರಿದ ಪುಣ್ಯ ಪರಂಪರೆ ನಮ್ಮದು. ಜಗತ್ತಿನ ಜನ ಕಣ್ಣು ಬಿಡುವ ಮೊದಲೇ ಈ ದೇಶದ ಗುರುಕುಲಗಳಲ್ಲಿ ವೇದ ಉಪನಿಷತ್ತುಗಳ ಜೊತೆಗೆ ಶಾಂತಿಯ ಪಾಠ ನಡೆಯುತ್ತಿದ್ದವು. ನಮ್ಮ ಋಷಿಗಳು ಬರಿ ಶಾಂತಿಯನ್ನು ಬೋಧಿಸಿ ಸುಮ್ಮನಾಗದೆ ಧರ್ಮರಕ್ಷಣೆಗಾಗಿ ಲೋಕದೊಳಿವಿಗಾಗಿ ಶಸ್ತ್ರ ವಿದ್ಯೆಯನ್ನು ಧಾರೆಯರೆದರು.ಆದರೆ ನಾವಾಗಿಯೇ ಇತರರ ಮೇಲೆ ಯಾವತ್ತಿಗೂ ದಾಳಿ ನಡೆಸಿದವರಲ್ಲ ಸರ್ವಕಾಲಕ್ಕೂ ಶಾಂತಿಯನ್ನೇ ಜಪಿಸುವ ನಾವುಗಳು ಯಾರಾದರೂ ನಮ್ಮ ಮೇಲೆ ದಾಳಿ ಮಾಡಿದರೆ ಅವರನ್ನ ಎದುರಿಸಿ ಶತ್ರುಗಳಿಗೆ ತಕ್ಕ ಪಾಠ ಕಲಿಸುವ ಶಕ್ತಿಯು ನಮ್ಮೊಳಗೆ ಅಡಗಿದೆ ಎಂದು ಕಾಲಕಾಲಕ್ಕೂ ಶೌರ್ಯವನ್ನು ತೋರಿಸುತ್ತಾ ಬಂದವರು ನಾವು. ಈ ದೇಶ ಕತ್ತಿಯನ್ನು ತೋರಿಸಿ ಜಗತ್ತಿನ ಜನರನ್ನು ಗೆದ್ದದ್ದಲ್ಲ ಬದಲಾಗಿ ತನ್ನ ಜ್ಞಾನದ ಸುಗಂಧವನ್ನು ವಿಶ್ವಕ್ಕೆ ಹರಡಿಸುತ್ತಾ ಮಾನವೀಯ ಮೌಲ್ಯಗಳನ್ನು ಸಾರಿದ ಪುಣ್ಯಭೂಮಿ ಇದು. ತಾಯಿ ಭಾರತೀಯ ಪುಣ್ಯ ಗರ್ಭದಲ್ಲಿ ಯೋಗಿಗಳು,ಋಷಿಗಳು, ತಪಸ್ವಿಗಳು, ವೀರಯೋಧರು ಹುಟ್ಟಿ ಬಂದರೆ ಹೊರತು ಸಮಾಜಕ್ಕೆ ಆಗಂತಕರಾದ ಭೂಮಿಯನ್ನೇ ಸರ್ವನಾಶಗೊಳಿಸಬೇಕೆನ್ನುವ ರಾಕ್ಷಸರಿಗೆ ಆ ತಾಯಿ ಯಾವತ್ತಿಗೂ ಅವಕಾಶವನ್ನೇ ಕೊಡಲಿಲ್ಲ. ಈ ಮಣ್ಣಿನ ವಿಶೇಷವಾದ ಗುಣಧರ್ಮವೆಂದರೆ ನಮ್ಮ ಶತ್ರುವೇ ಆಗಿದ್ದರೂ ಸಹಾಯವನ್ನ ಕೇಳಿಕೊಂಡು ನಮ್ಮ ಬಳಿ ಬಂದರೆ ಅವನ ಬೆನ್ನಿಗೆ ನಿಂತು ಸಹಕಾರ ನೀಡುವ ಹದುಳ ಹೃದಯದ ಮನಸ್ಸುಗಳು ನಮ್ಮದು. ಆತನೇನಾದರೂ ನಮ್ಮ ವಿರುದ್ಧವೇ ಹೊಂಚು ಹಾಕಿದರೆ ನೀರು ನೆಲೆಯೇ ಇಲ್ಲದ ಹಾಗೆ ಆತನಿಗೆ ಮಣ್ಣುಮುಕ್ಕಿಸುವ ತಾಕತ್ತು ನಮ್ಮೊಳಗಿದೆ. ಚೀನಾ ಯಾತ್ರಿಕನಾದ ಹ್ಯಯೆನ್ ತ್ಸಾoಗ್ ತನ್ನ ಸಿ ಯು ಕಿ ಗ್ರಂಥದಲ್ಲಿ ಭಾರತೀಯರ ಬಗ್ಗೆ ಹೇಳುವಾಗ ಈ ಜನರು ನೀರನ್ನು ಕೇಳಿಕೊಂಡು ಬಂದವರಿಗೆ ಹಾಲನ್ನೇ ಕುಡಿಯಲು ನೀಡುವಂತಹ ನಿಷ್ಕಲ್ಮಶವಾದ ಹೃದಯವಂತರು ಎಂದು ತನ್ನ ಗ್ರಂಥದಲ್ಲಿ ವರ್ಣಿಸಿದ್ದಾನೆ. ನಮ್ಮ ಪೂರ್ವಜರು ಅಹಿಂಸಾ ಪರಮೋ ಧರ್ಮ: ಹೇಳುವುದರ ಜೊತೆಗೆ ಧರ್ಮ ಹಿಂಸಾ ತಥೈವ ಚ// ಎಂದು ಹೇಳುವುದನ್ನು ಮರೆತಿಲ್ಲ. ನಮಗೆ ಹೋರಾಟಗಳು ಹೊಸದಲ್ಲ ಸಾವಿರಾರು ವರುಷಗಳಿಂದ ಅನೇಕ ದಾಳಿಗಳನ್ನು ಎದುರಿಸುತ್ತಾ ಇಂದಿಗೂ ನಮ್ಮ ಪರಂಪರೆಯ ಜೀವಂತಿಕೆಯನ್ನ ಉಳಿಸಿಕೊಂಡು ಬಂದಿದ್ದೇವೆ ಎಂದರೆ ಅದು ನಮ್ಮ ಮೇಲಿನ ದಾಳಿಗಳನ್ನು ಎದುರಿಸಿ ನಿಂತ ಪ್ರತಿಫಲದಿಂದ. ನಮ್ಮ ಪೂರ್ವಜರ ಹೋರಾಟದ ಯಶೋಗಾಥೆಯನ್ನು ನಾವು ಯಾವುದೇ ಕಾರಣಕ್ಕೂ ಮರೆಯುವಂತಿಲ್ಲ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಹೇಳುವ ಹಾಗೆ ಯಾವ ವ್ಯಕ್ತಿ ಯಾವ ದೇಶ ತನ್ನ ಇತಿಹಾಸವನ್ನ ಮರೆಯುತ್ತದೆಯೋ ಅದು ಮುಂದೆ ಇತಿಹಾಸವನ್ನ ಸೃಷ್ಟಿಸಲಾರದು ಆ ದೃಷ್ಟಿಯಿಂದ ನಮ್ಮ ಇತಿಹಾಸದ ನೆನಪುಗಳನ್ನು ಜೀವಂತವಾಗಿಟ್ಟುಕೊಳ್ಳಬೇಕಿದೆ. ಇಂದು ನಾವು ಬಾಹ್ಯ ಯುದ್ಧಗಳ ಜೊತೆಗೆ ಮಾನಸಿಕ ಯುದ್ಧಗಳನ್ನು ಎದುರಿಸಬೇಕಾಗಿದೆ. ನಾವು ಯಾವತ್ತಿಗೂ ಶತ್ರುಗಳಿಂದ ಸೋತವರಲ್ಲವೇ ಅಲ್ಲ ಬದಲಿಗೆ ನಾವೇನಾದರೂ ಸೋತಿದ್ದರೆ ನಮ್ಮವರಿಂದಲೇ. ಶತ್ರುವಿನ ಗುಂಡನ್ನು ಮೆಟ್ಟಿನಿಲ್ಲಬಹುದು ಆದರೆ ಜೊತೆಯಲ್ಲೇ ಇದ್ದು ವಿರೋಧಿಗಳ ಜೊತೆಗೆ ಕೈಜೋಡಿಸಿ ಬೆನ್ನಿಗೆ ಚೂರಿ ಹಾಕುವವರನ್ನು ಎದುರಿಸುವುದು ಅಷ್ಟು ಸುಲಭವಾದದ್ದಲ್ಲ. ಈ ದೇಶದ ಬಹುತೇಕ ಹೋರಾಟಗಾರರು ಹುತಾತ್ಮರಾಗಲು ಜೊತೆಗಿದ್ದವರು ಮಾಡಿದ ಮೋಸದಿಂದಲೇ.ಅದಕ್ಕಾಗಿ ನಾವು ಇದ್ಯಾವುದನ್ನು ಮರೆಯದೆ ಬಲು ಎಚ್ಚರಿಕೆಯಿಂದ ದೃಢವಾದ ಹೆಜ್ಜೆಗಳನ್ನ ಇಡಬೇಕಿದೆ. ಈ ಪುಣ್ಯ ಭೂಮಿ ನಮ್ಮೆಲ್ಲರ ಮಾತೃಭೂಮಿ ತಾಯಿ ಭಾರತೀಯ ರಕ್ಷಣೆ ನಮ್ಮೆಲ್ಲರ ಜವಾಬ್ದಾರಿಯಾಗಿದೆ. ಚಿಕ್ಕ ಚಿಕ್ಕ ಮಕ್ಕಳು,ವೀರ ವನಿತೆಯರು, ಪುರುಷಸಿಂಹಗಳು, ವಯೋವೃದ್ಧರನ್ನೊಳಗೊಂಡಂತೆ ಲಕ್ಷಾಂತರ ಜನರು ಈ ಮಣ್ಣಿಗಾಗಿ ತ್ಯಾಗ ಮತ್ತು ಬಲಿದಾನದ ಗೈದಿದ್ದಾರೆ ಈಗಲೂ ನಮ್ಮ ದೇಶದ ಸೈನಿಕನ ರನೋತ್ಸಾಹ ನೋಡಿದರೆ ಎಂಥಾ ಬಲಾಢ್ಯ ಯುದ್ಧೋಪಕರಣಗಳನ್ನ ಹೊಂದಿದವನಿಗೂ ಮೈ ನಡುಕ ಹುಟ್ಟಿಸುತ್ತದೆ. ಈ ಸಂದಿಗ್ನ ಸಮಯದಲ್ಲಿ ಸೈನಿಕನಿಗೆ ಉತ್ಸಾಹ ತುಂಬುತ್ತಾ ಅವನ ಕುಟುಂಬದ ಜೊತೆಗೆ ನಾವುಗಳು ನಿಲ್ಲಬೇಕಾಗಿದೆ ಇದು ನಮ್ಮೆಲ್ಲರ ಬಹುದೊಡ್ಡ ಜವಾಬ್ದಾರಿಯಾಗಿದೆ.

                           ✍️ಶ್ರೀ ರಾಮಕೃಷ್ಣ ದೇವರು.
                                  ವಿಜಯಪುರ

Related posts

ಥಿಯರಿಟಿಕಲ್ ಫಿಸಿಕ್ಸ್ ನಲ್ಲಿ ಸಂಶೋಧನೆ ನಡೆಸಿ ಮಂಡಿಸಿದ ಪ್ರಬಂಧಕ್ಕೆ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ ನಿಂದ ರಂಜಿತ್ ಕುಮಾರ್ ಅವರಿಗೆ ಡಾಕ್ಟರೇಟ್ ಪದವಿ

Suddi Udaya

ಪ್ರಧಾನಿ ಭಾಷಣ ಕನ್ನಡಕ್ಕೆ ಭಾಷಾಂತರ : ಎಂ.ಎಲ್.ಸಿ ಪ್ರತಾಪಸಿಂಹ ನಾಯಕ್ ರಿಗೆ ರಾಷ್ಟ್ರ ನಾಯಕರ ಮೆಚ್ಚುಗೆ

Suddi Udaya

ಅತ್ಯಂತ ಅಪರೂಪದ ಕುಂಭಮೇಳದಲ್ಲಿ ಪವಿತ್ರ ಸ್ಥಾನಗೈದ ಎಕ್ಸೆಲ್ ಕಾಲೇಜಿನ ಅಧ್ಯಕ್ಷ ಸುಮಂತ್ ಕುಮಾರ್ ಜೈನ್

Suddi Udaya

ಧರ್ಮಸ್ಥಳ ಲಕ್ಷದೀಪೋತ್ಞವಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನ ಉದ್ಘಾಟನೆ

Suddi Udaya

ಬೀಜಾಡಿಯ ಯೋಧ ಅನೂಪ್ ಪೂಜಾರಿಯವರ ಶವ ಪೆಟ್ಟಿಗೆಗೆ ಹೆಗಲು ಕೊಟ್ಟ ಸಂಸದ ಕ್ಯಾ| ಬ್ರಿಜೇಶ್ ಚೌಟ

Suddi Udaya

ಕುಂಭಮೇಳದಲ್ಲಿ ಕಾಲ್ತುಳಿತದಿಂದಾಗಿ ಪ್ರಾಣ ಕಳೆದುಕೊಂಡ ಭಕ್ತರಿಗಾಗಿ ವಿ.ಪ. ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಂತಾಪ

Suddi Udaya
error: Content is protected !!