May 11, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆ

ಶಿಶಿಲ ಅರಸಿನಮಕ್ಕಿ ಶೌರ್ಯ ವಿಪತ್ತು ನಿರ್ವಹಣಾ ಘಟಕದ ಮಾಸಿಕ ಸಭೆಯು ಮೇ 6 ರಂದು ಶಿಶಿಲದ ನಾಗನಡ್ಕ ಗಣೇಶ ಸಮುದಾಯ ಭವನದಲ್ಲಿ ನಡೆಯಿತು.


ಮಾಸಿಕ ಸಭೆಯಲ್ಲಿ ಭಾಗವಹಿಸಿದ ತಾಲೂಕು ಯೋಜನಾಧಿಕಾರಿಗಳಾದ ಯಶೋಧರ ಉತ್ತಮ ಸೇವೆ ಸಲ್ಲಿಸುತ್ತಿರುವ ಘಟಕವನ್ನು ಅಭಿನಂದಿಸುತ್ತಾ ಮುಂದೆಯೂ ಯೋಜನೆಯ ಎಲ್ಲಾ ಕಾರ್ಯಕ್ರಮಗಳಿಗೆ ಸಹಕಾರವನ್ನು ನೀಡಲು ವಿನಂತಿಸಿದರು.


ವಿಪತ್ತು ನಿರ್ವಹಣಾ ಕಾರ್ಯಕ್ರಮದ ಯೋಜನಾಧಿಕಾರಿಗಳಾದ ಜಯವಂತ ಪಟಗಾರ್ ಭಾಗವಹಿಸಿ ಘಟಕವು ಇದುವರೆಗೆ ಮಾಡಿದ ಸೇವಾಕಾರ್ಯಗಳು, ಪಡೆದ ಭತ್ಯೆಗಳು ಹಾಗೂ ಸದಸ್ಯವಾರು ಹಾಜರಾತಿ ಬಗ್ಗೆ ದಾಖಲಾತಿ ಸಹಿತ ಮಾಹಿತಿ ನೀಡಿ ಮುಂದಿನ ದಿನಗಳಲ್ಲಿ ಘಟಕವು ಯಾವ ರೀತಿ ಕಾರ್ಯಾಚರಿಸಬೇಕೆಂಬ ಮಾಹಿತಿಯನ್ನು ನೀಡಿದರು.


ಯೋಜನಾಧಿಕಾರಿ ಕಿಶೋರ್ ಮಾದರಿ ತಂಡವಾಗಿ ಕಾರ್ಯಾಚರಿಸಲು ಉಪಯುಕ್ತ ಸಲಹೆಗಳನ್ನು ನೀಡಿದರು. ಸಭೆಯಲ್ಲಿ ವಲಯ ಮೇಲ್ವಿಚಾರಕರಾದ ಶ್ರೀಮತಿ ಶಶಿಕಲಾರವರು ಉಪಸ್ಥಿತರಿದ್ದರು. ರಮೇಶ ಬೈರಕಟ್ಟ ಸ್ವಾಗತಿಸಿ, ಕುಶಾಲಪ್ಪ ಗೌಡ ಧನ್ಯವಾದ ನೀಡಿದರು. ಸಂಯೋಜಕರಾದ ರಶ್ಮಿತಾ ಕಾರ್ಯಕ್ರಮ ನಿರೂಪಿಸಿದರು.

Related posts

ಎಂಟು ದಿನಗಳ ಹಿಂದೆ ಮನೆಯಲ್ಲಿ ಇಲಿ ಪಾಷಾಣ ಸೇವಿಸಿದ್ದ ಗಡಾ೯ಡಿ ಗ್ರಾಮದ ಮಜಲು ನಿವಾಸಿ ಸಂಜೀವ ಪೂಜಾರಿ ಸಾವು

Suddi Udaya

ಬೆಳ್ತಂಗಡಿ ಕೆಂಬರ್ಜೆ ನಿವಾಸಿ ಗುರುವಪ್ಪ ಪೂಜಾರಿ ನಿಧನ

Suddi Udaya

ಬೆಳ್ತಂಗಡಿ ಬ್ಯಾಟರಿ ಅಂಗಡಿಗೆ ಕನ್ನ ಹಾಕಿದ ಕಳ್ಳರು: ಅಂಗಡಿ ಶಟರ್ ಮುರಿದು ಒಳಹೋಗಲು ಪ್ರಯತ್ನ, ಗಾಳಿ-ಮಳೆಗೆ ಸಿಸಿ ಕ್ಯಾಮರಾ ಬಂದ್ ಮಾಡಿದ್ದರಿಂದ ಕಳ್ಳರ ಚಹರೆ ಪತ್ತೆಯಾಗಿಲ್ಲ.

Suddi Udaya

ಗೇರುಕಟ್ಟೆ :ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಪದಾಧಿಕಾರಿಗಳ ಆಯ್ಕೆ: ಅಧ್ಯಕ್ಷರಾಗಿ ಪುರುಷೋತ್ತಮ ಜಿ

Suddi Udaya

ಎಸ್‌ಡಿಪಿಐ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರ ಸಮಿತಿ ಮಾಸಿಕ ಸಭೆ ಮತ್ತು ಇಫ್ತಾರ್ ಸಮ್ಮಿಲನ

Suddi Udaya

ಗುರುವಾಯನಕೆರೆ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ದಾಖಲಾತಿ ಪ್ರಕ್ರಿಯೆ ಆರಂಭ

Suddi Udaya
error: Content is protected !!