27.9 C
ಪುತ್ತೂರು, ಬೆಳ್ತಂಗಡಿ
March 6, 2026
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ನಾರಾವಿಯಲ್ಲಿ ದೇವೇಂದ್ರ ಹೆಗ್ಡೆ ಕೊಕ್ರಾಡಿ ಮಾಲಕತ್ವದ ಉಮಾಮಹೇಶ್ವರ ಪೆಟ್ರೋಲ್ ಪಂಪ್ ಶುಭಾರಂಭ

ಬೆಳ್ತಂಗಡಿ: ಗುರುವಾಯನಕೆರೆ -ನಾರಾವಿ ರಾಜ್ಯ ರಸ್ತೆ ಸಮೀಪ ನೂತನವಾಗಿ ನಿರ್ಮಿಸಿರುವ ಉಮಾಮಹೇಶ್ವರ ಪೆಟ್ರೋಲ್ ಪಂಪ್ ಇದರ ಉದ್ಘಾಟನೆಯನ್ನು ಅಳದಂಗಡಿ ಅರಮನೆಯ ತಿಮ್ಮಣ್ಣರಸರಾದ ಡಾ.ಪದ್ಮಪ್ರಸಾದ್ ಅಜಿಲರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿ ಉದ್ಯಮದಲ್ಲಿ ಗುಣಮಟ್ಟ ಹಾಗೂ ಸೇವೆ ಮುಖ್ಯ ಎಂದು ಶುಭ ಕೋರಿದರು.

ಉಮಾಮಹೇಶ್ವರ ಪೆಟ್ರೋಲ್ ಪಂಪ್ ಇದರ ಮಾಲಕ, ಕೈಗಾರೀಕೋದ್ಯಮಿ ದೇವೇಂದ್ರ ಹೆಗ್ಡೆ ಕೊಡಂಗೆಗುತ್ತು ಕೊಕ್ರಾಡಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಸಹಕರಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಅರ್ಪಿಸಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಶಾಸಕ ಪ್ರತಾಪ್ ಸಿಂಹ ನಾಯಕ್,ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್, ಎಮ್.ಆರ್ ಪಿ.ಎಲ್ ಚೀಫ್ ರಿಜಿನಲ್ ಮ್ಯಾನೇಜರ್ ಸ್ವಾಮಿ ಪ್ರಸಾದ್, ಅಳದಂಗಡಿ ಸತ್ಯದೇವತಾ ದೇವಸ್ಥಾನದ ಆಡಳಿತ ಮೊಕ್ತೇಸರ ಶಿವಪ್ರಸಾದ್ ಅಜಿಲ, ನಾರಾವಿ ಗ್ರಾ.ಪಂ.ಅಧ್ಯಕ್ಷ ರಾಜವರ್ಮ ಜೈನ್, ನಾರಾವಿ ಸೂರ್ಯನಾರಾಯನ ದೇವಸ್ಥಾನ ಆಡಳಿತ ಮೊಕ್ತೇಸರಾದ ರವೀಂದ್ರ ಪೂಜಾರಿ ಬಾಂದೊಟ್ಟು, ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ಆಡಳಿತ ಮೊಕ್ತೇಸರಾದ ಉದಯ್ ಕುಮಾರ್ ಹೆಗ್ಡೆ, ನಾರಾವಿ ಸಿಎ ಬ್ಯಾಂಕ್ ಅಧ್ಯಕ್ಷ ಸುಧಾಕರ್ ಭಂಡಾರಿ, ಉದ್ಯಮಿ ಶ್ರೀನಿವಾಸ್ ಕಿಣಿ ನಾರಾವಿ, ಮರೋಡಿ ಉಮಾಮಹೇಶ್ವರ ದೇವಸ್ಥಾನದ ಕಾರ್ಯದರ್ಶಿ ಜಯಂತ್ ಕೋಟ್ಯಾನ್, ಕೊಕ್ರಾಡಿ ಕ್ಷೇಮ ಕ್ಲಿನಿಕ್ ಡಾ.ವಿಷ್ಣು ಕುಮಾರ್, ನಾರಾವಿ ಜಿನ ಚೈತ್ತಾಲಯ ಆಡಳಿತ ಮೊಕ್ತೇಸರಾದ ನಿರಂಜನ ಅಜ್ರಿ ರಾಮೇರಗುತ್ತು ಹಾಗೂ ಉದ್ಯಮಿ ವಸಂತ್ ಭಟ್ ನಾರಾವಿ ಉಪಸ್ಥಿತರಿದ್ದರು.

ಅತೀ ಬೇಗ ಕಟ್ಟಡ ನಿರ್ಮಿಸಿ ಕೊಟ್ಟ ಗುತ್ತಿಗೆದಾರ ದಯಾನಂದ ಕುಲಾಲ್ ಅವರನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾರ್ಯಕ್ತಮದಲ್ಲಿ ಅಳದಂಗಡಿ ಸಿಎ ಬ್ಯಾಂಕ್ ಅಧ್ಯಕ್ಷ ರಾಕೇಶ್ ಹೆಗ್ಡೆ ಬಳಂಜ, ಮರೋಡಿ ಗ್ರಾ.ಪಂ ಅಧ್ಯಕ್ಷ ರತ್ನಾಕರ ಬುಣ್ಣನ್,ಪ್ರಮುಖರಾದ ಜೀವಂಧರ್ ಜೈನ್,ದೈಹಿಕ ಶಿಕ್ಷಕ ಪ್ರಭಾಕರ್ ನಾರಾವಿ ,ಉದ್ಯಮಿಗಳಾದ ಶ್ರೀನಿವಾಸ್ ಕಿಣಿ, ಸಂತೋಷ್ ಹೆಗ್ಡೆ ಮಾರುತಿ ನಿಲಯ, ನಾರಾವಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಜಗದೀಶ್ ಹೆಗ್ಡೆ,ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಶಶಿಕಾಂತ್ ಜೈನ್, ನಿರೂಪಕ ವಿಜಯ್ ಕುಮಾರ್ ಜೈನ್, ಉದಯ ಹೆಗ್ಡೆ ನಾರಾವಿ, ಅಬಿಜಿತ್ ಜೈನ್ ನಾರಾವಿ, ಶ್ರೀರಂಗ ಮಯ್ಯ,ಮೋಹನ್ ಅಂಡಿಂಜೆ, ಗುರುಪ್ರಸಾದ್ ನಾರಾವಿ, ಗೀರೀಶ್ ಹೆಗ್ಡೆ,ಕೊಂಡಂಗೆಗುತ್ತು ಕುಟುಂಬ ಸದಸ್ಯರು ಮೊದಲಾದವರು ಉಪಸ್ಥಿತರಿದ್ದು ಶುಭ ಕೋರಿದರು.

ನೇಹಾ ಹೆಗ್ಡೆ ಪ್ರಾರ್ಥನೆ ಹಾಡಿದರು. ಮಾಲಕ ದೇವೇಂದ್ರ ಹೆಗ್ಡೆ- ಶ್ರೀಮತಿ ದೀಪಾ ಹೆಗ್ಡೆ ಕೊಕ್ರಾಡಿ ಸ್ವಾಗತಿಸಿದರು.ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ನಿರೂಪಿಸಿದರು, ಪಾಲುದಾರ ನವೀನ್ ಹೆಗ್ಡೆ ವಂದಿಸಿದರು.

Related posts

ದ.ಕ. ಸ.ಹಾ.ಉ. ಒಕ್ಕೂಟದ ನೂತನ ಜಿಲ್ಲಾ ನಿರ್ದೇಶಕರಾಗಿ ಆಯ್ಕೆಯಾದ ಎಚ್. ಪ್ರಭಾಕರ ಹುಲಿಮೇರು ರವರಿಗೆ ಶಾಸಕ ಹರೀಶ್ ಪೂಂಜರಿಂದ ಅಭಿನಂದನೆ

Suddi Udaya

ಬೆಳಾಲು ಪ್ರೌಢಶಾಲೆಯಲ್ಲಿ ಬೇಸಿಗೆ ಶಿಬಿರದ ಸಮಾರೋಪ

Suddi Udaya

ಗುರುವಾಯನಕೆರೆ ಎಕ್ಸೆಲ್ ಕಾಲೇಜಿನಲ್ಲಿ ಕನ್ನಡ ರಾಜ್ಯೋತ್ಸವ ಆಚರಣೆ

Suddi Udaya

ನಡ ಗ್ರಾ.ಪಂ. ವ್ಯಾಪ್ತಿಯಲ್ಲಿ ಉಚಿತ ರೇಬಿಸ್ ರೋಗ ನಿರೋಧಕ ಲಸಿಕಾ ಶಿಬಿರ

Suddi Udaya

ಕೋಟ್ಯಾನ್ ಫ್ರೆಂಡ್ಸ್ ವಾಟ್ಸಾಪ್ ಗ್ರೂಪಿನಿಂದ ಎರಡನೇ ಸೇವಾ ಯೋಜನೆ ಹಸ್ತಾಂತರ

Suddi Udaya

ಬೆಳ್ತಂಗಡಿ: ವಾಣಿ ಕಾಲೇಜಿನ ವಿದ್ಯಾರ್ಥಿ ಅನುಕ್ಷಾ ರಾಷ್ಟ್ರೀಯ ಭಾವೈಕ್ಯತಾ ಶಿಬಿರಕ್ಕೆ ಆಯ್ಕೆ

Suddi Udaya
error: Content is protected !!