22.7 C
ಪುತ್ತೂರು, ಬೆಳ್ತಂಗಡಿ
May 10, 2025
ಗ್ರಾಮಾಂತರ ಸುದ್ದಿಚಿತ್ರ ವರದಿತಾಲೂಕು ಸುದ್ದಿಬೆಳ್ತಂಗಡಿವರದಿ

ಆಪರೇಷನ್ ಸಿಂದೂರ್ ” ಯಶಸ್ವಿ: ಸೈನಿಕರಿಗೆ ಮನ್ ಶರ್ ಪ್ಯಾರಾಮೆಡಿಕಲ್ ವಿದ್ಯಾರ್ಥಿಗಳಿಂದ ಬಿಗ್ ಸೆಲ್ಯೂಟ್

ಬೆಳ್ತಂಗಡಿ: ಜಮ್ಮು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ಭಯೋತ್ಪಾದನಾ ಕೃತ್ಯಕ್ಕೆ ಪ್ರತಿರೋಧವಾಗಿ ಭಾರತದ ಸೈನಿಕರು ನಡೆಸಿರುವ ಆಪರೇಷನ್ ಸಿಂಧೂರ್ ನ ಯಶಸ್ವಿ ಕಾರ್ಯಾಚರಣೆಯ ಬಗ್ಗೆ, ಸೈಯದ್ ಉಮರ್ ಅಸ್ಸಖಾಫ್ ತಂಙಳ್ ನೇತೃತ್ವದ ಬೆಳ್ತಂಗಡಿ ಮನ್ ಶರ್ ಪ್ಯಾರಾ ಮೆಡಿಕಲ್ ಕಾಲೇಜಿನಲ್ಲಿ ಬಿಗ್ ಸೆಲ್ಯೂಟ್ ಕಾರ್ಯಕ್ರಮ ನಡೆಸಲಾಯಿತು.
ಸಂಸ್ಥೆಯ ಪ್ರಾಂಶುಪಾಲ ಹೈದರ್ ಮರ್ದಾಳ ಅಪರೇಷನ್ ಸಿಂದೂರ್ ಬಗ್ಗೆ ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದರು.

ನೆರೆದಿದ್ದ ಕಾಲೇಜಿನ ವಿದ್ಯಾರ್ಥಿಗಳು, ಸಿಬ್ಬಂದಿ ವರ್ಗದವರು ಆಪರೇಷನ್ ಸಿಂದೂರ್ ನ ಯಶಸ್ವಿಗೆ ಕಾರಣರಾದ ಹೆಮ್ಮೆಯ ಸೈನಿಕರಿಗೆ ಬಿಗ್ ಸೆಲ್ಯೂಟ್ ಮಾಡುವ ಮೂಲಕ ಸಂಭ್ರಮಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯನಿರ್ವಹಣಾಧಿಕಾರಿ ರಶೀದ್ ಕುಪ್ಪೆಟ್ಟಿ, ಪ್ಯಾರಾ ಮೆಡಿಕಲ್ ಉಪ ಪ್ರಾಂಶುಪಾಲೆ ಗೌತಮಿ ಶರಣ್, ಪಿಯು ಕಾಲೇಜಿನ ಉಪನ್ಯಾಸಕರಾದ ನಿರುಪಮಾ, ಪವಿತ್ರ ಎಚ್, ನಿಶಾ, ಸುಪ್ರಿಯಾ, ಅಕೌಂಟೆಂಟ್ ಶಬೀರ್ ಪಲ್ಲಾದೆ, ಶಿಕ್ಷಕಿರಾದ ರಝಿಯಾ, ಸೈಫುನ್ನಿಸಾ, ಕಚೇರಿ ಸಿಬ್ಬಂದಿಗಳಾದ ಪ್ರಜ್ಞಾ ಹಾಗೂ ಹಫೀಫಾ ಉಪಸ್ಥಿತರಿದ್ದರು.

Related posts

ಬಳಂಜ ವೈಭವದ ಶಾರದೋತ್ಸವ ಆಮಂತ್ರಣ ಪತ್ರಿಕೆ ಬಿಡುಗಡೆ

Suddi Udaya

ವಾಲಿಬಾಲ್ ಪಂದ್ಯಾಟ: ಕೊಯ್ಯೂರು ಸರಕಾರಿ ಪ್ರೌಢ ಶಾಲೆಯ ಹುಡುಗರ ತಂಡ ಪ್ರಥಮ ಸ್ಥಾನ

Suddi Udaya

ಪುದುವೆಟ್ಟು ಶ್ರೀ ಧ.ಮಂ.ಅ.ಹಿ.ಪ್ರಾ. ಶಾಲೆಯಲ್ಲಿ ಆಂಗ್ಲ ಭಾಷಾ ಕೈ ಬರಹದ ತರಬೇತಿ ಕಾರ್ಯಾಗಾರ

Suddi Udaya

ಮೇಲಂತಬೆಟ್ಟು ಶ್ರೀ ಬ್ರಹ್ಮ ಬೈದರ್ಕಳ ಧರ್ಮಚಾವಡಿ ಪಾಲೆತ್ತಡಿ ಗುತ್ತು ಜೀರ್ಣೋದ್ದಾರದ ಸಮಾಲೋಚನ ಸಭೆ

Suddi Udaya

ಶೇಷನಾಗ ಜೋಡುಕರೆ ಕಂಬಳದ ಸಮಾರಂಭದಲ್ಲಿ ಚಂದ್ರಕಾಂತ ನಿಡ್ಡಾಜೆ ರವರಿಗೆ ಸನ್ಮಾನ

Suddi Udaya

ವಿಧಿವಿಜ್ಞಾನ ಕ್ಷೇತ್ರ ಉದ್ಯೋಗಕ್ಕಾಗಿ ನಡೆಸಿದ ಫೋರೆನ್ಸಿಕ್‌ ಸೈನ್ಸ್‌ ಅರ್ಹತಾ ಪರೀಕ್ಷೆಯಲ್ಲಿ ಎಕ್ಸೆಲ್ ವಿದ್ಯಾರ್ಥಿಗಳಿಂದ ಅತ್ಯುತ್ತಮ ಸಾಧನೆ

Suddi Udaya
error: Content is protected !!